alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹ್ನವಿ ಬ್ಯಾಗ್ ಬೆಲೆಯಲ್ಲಿ ಕಾರು ಖರೀದಿ ಮಾಡಬಹುದು…!

ಹಿರಿಯ ನಟಿ ದಿವಂಗತ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗ್ತಿದ್ದಾಳೆ. ಜಾಹ್ನವಿ ಚಿತ್ರ ತೆರೆಗೆ ಬರುವ ಮೊದಲೇ ಆಕೆ ಸ್ಟೈಲ್ ಹಾಗೂ ನಟನೆ ಸುದ್ದಿಯಲ್ಲಿದೆ. ಅನೇಕ ಬಾರಿ ಜಾಹ್ನವಿ ಸ್ಟೈಲನ್ನು ತಾಯಿ ಶ್ರೀದೇವಿಗೆ ಹೋಲಿಕೆ ಮಾಡಲಾಗುತ್ತದೆ.

ಸದ್ಯ ಜಾಹ್ನವಿ ಧಡಕ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಜಾಹ್ನವಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಬಿಳಿ ಕುರ್ತಾ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಜಾಹ್ನವಿ ಬ್ಯಾಗ್ ಎಲ್ಲರ ಗಮನ ಸೆಳೆಯಿತು. ಜಂಬೋ ಕ್ಲಾಸಿಕ್ ಬ್ಯಾಗ್ ಹಿಡಿದಿದ್ದ ಜಾಹ್ನವಿ ಸುಂದರವಾಗಿ ಕಾಣ್ತಿದ್ದಳು.

ಜಾಹ್ನವಿಯ ಬ್ಯಾಗ್ ಬೆಲೆ ಈಗ ಚರ್ಚೆಯ ವಿಷ್ಯವಾಗಿದೆ. 6820 ಡಾಲರ್ ಅಂದ್ರೆ ಸುಮಾರು 4 ಲಕ್ಷ ರೂಪಾಯಿ ಬ್ಯಾಗ್ ಹಿಡಿದಿದ್ದಳು ಜಾಹ್ನವಿ. ಈ ಬೆಲೆಗೆ  ಹ್ಯಾಚ್ಬ್ಯಾಕ್ ಕಾರ್ ಬರುತ್ತೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಾಹ್ನವಿ ಅಭಿನಯದ ಧಡಕ್ ಮರಾಠಿ ಚಿತ್ರ ಸೈರಾಟ್ ರಿಮೇಕ್. ಜುಲೈ 20ರಂದು ಚಿತ್ರ ತೆರೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...