alex Certify
ಕನ್ನಡ ದುನಿಯಾ       Mobile App
       

Kannada Duniya

ತನಿಖೆಯಲ್ಲಿ ಬಯಲಾಯ್ತು ಕಂಗನಾ ಕುರಿತ ಸ್ಪೋಟಕ ಸತ್ಯ

Kangana hritik 9986ಸಮಯ ಸಿಕ್ಕಾಗಲೆಲ್ಲಾ ಪರಸ್ಪರ ಕೆಸೆರೆರೆಚಾಟ ನಡೆಸುತ್ತಿದ್ದ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ಕದನಕ್ಕೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆಯಿದೆ. ತನಿಖೆ ನಡೆಸಿದ್ದ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ಹಲವು ಪ್ರಮುಖ ಮಾಹಿತಿಗಳು ದೊರೆತಿವೆ ಎನ್ನಲಾಗಿದೆ.

ಈ ಕುರಿತ ಫೋರೆನ್ಸಿಕ್ ರಿಪೋರ್ಟ್ ಹೊರ ಬಿದ್ದಿದ್ದು, ಹೃತಿಕ್ ರೋಷನ್, ಕಂಗನಾಗೆ ಒಂದೇ ಒಂದು ಇ ಮೇಲ್ ಸಂದೇಶವನ್ನೂ ತನ್ನ ಅಧಿಕೃತ ಇ ಮೇಲ್ ಐಡಿಯಿಂದ ಕಳುಹಿಸಿಲ್ಲದಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ಕಂಗನಾಗೆ ಹೃತಿಕ್ ರೋಷನ್, ಕಾಲ್ ಮಾಡುವುದಾಗಲಿ ಅಥವಾ ಸಂದೇಶ ಕಳುಹಿಸಿಲ್ಲವೆಂಬ ಸಂಗತಿ ಬೆಳಕಿಗೆ ಬಂದಿದೆ.

ಇದಕ್ಕೆ ವ್ಯತಿರಿಕ್ತವಾಗಿ ಹೃತಿಕ್ ರೋಷನ್ ಮೇಲೆ ಏಕಮುಖ ಪ್ರೀತಿ ಹೊಂದಿದ್ದ ಕಂಗನಾ ರನಾವತ್, ಹೃತಿಕ್ ರೋಷನ್ ರ ನಕಲಿ ಇ ಮೇಲ್ ಖಾತೆ ಸೃಷ್ಟಿಸಿದ್ದ ವ್ಯಕ್ತಿಗೆ ಅದು ಹೃತಿಕ್ ರೋಷನ್ ಅವರದ್ದೇ ಖಾತೆ ಎಂದು ಭಾವಿಸಿ 3000 ಕ್ಕೂ ಅಧಿಕ ಇ ಮೇಲ್ ಸಂದೇಶ ಕಳುಹಿಸಿರುವುದು ತಿಳಿದುಬಂದಿದೆ. ತನಿಖೆಗಾಗಿ ಹೃತಿಕ್ ರೋಷನ್ ಬಳಸುತ್ತಿದ್ದ ಲ್ಯಾಪ್ ಟಾಪ್, ಮೊಬೈಲ್ ಎಲ್ಲವನ್ನೂ ಪರಿಶೀಲಿಸಿರುವ ಪೊಲೀಸರು ಇದೀಗ ಹೃತಿಕ್ ರೋಷನ್ ರದ್ದು ಯಾವುದೇ ತಪ್ಪಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ. ಏಪ್ರಿಲ್ 30 ರಂದು ಕಂಗನಾ ತಮ್ಮ ಹೇಳಿಕೆಯನ್ನು ಪೊಲೀಸರ ಮುಂದೆ ದಾಖಲಿಸಲಿದ್ದು, ಬಳಿಕ ವರದಿ ಮಂಡಿಸಲಾಗುವುದೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...