alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಂ ಒಂದೇ ಅಲ್ಲ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ ಈ ನಟಿಯರು

ಬಾಲಿವುಡ್ ಬೆಡಗಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾಳೆ. ಮೇ 8 ರಂದು ಆನಂದ್ ಅಹುಜಾ ಜೊತೆ ಸೋನಂ ಹೊಸ ಜೀವನ ಶುರು ಮಾಡಲಿದ್ದಾರೆ. ಮದುವೆ ಖುಷಿಯಲ್ಲಿರುವ ಸೋನಂ ಸಂದರ್ಶನವೊಂದರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಹೇಳಿದ್ದಳು.

ಸೋನಂ 13 ವರ್ಷದಲ್ಲಿರುವಾಗ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಳಂತೆ. ತಾಯಿ ಜೊತೆ ಸುತ್ತಾಡಲು ಹೋದಾಗ ಆಕೆ ಹಿಂದೆ ಬಂದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದನಂತೆ. ಅದನ್ನು ಈಗ್ಲೂ ಮರೆಯಲೂ ಸಾಧ್ಯವಿಲ್ಲವೆಂದು ಸೋನಂ ಕಣ್ಣೀರಿಟ್ಟಿದ್ದಳು. ಸೋನಂ ಕಪೂರ್ ಒಂದೇ ಅಲ್ಲ ಬಾಲಿವುಡ್ ನ ಅನೇಕ ನಟಿಯರು ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ.

ದೊಡ್ಡ ಪರದೆ ಮೇಲೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಬಿಪಾಷಾ ಬಸು ಕೂಡ ಕಿರುಕುಳಕ್ಕೊಳಗಾಗಿದ್ದಾಳೆ. ರಾಜ್-3 ಪ್ರಚಾರಕ್ಕೆ ಅಹಮದಾಬಾದ್ ಗೆ ಹೋದಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಬಿಪಾಷಾ ಸ್ಕರ್ಟ್ ಬಿಚ್ಚಲು ಯತ್ನಿಸಿದ್ದ.

2005ರಲ್ಲಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೆ ಹೋಗಿದ್ದ ಕತ್ರಿನಾ ಕೂಡ ಕಿರುಕುಳಕ್ಕೊಳಗಾಗಿದ್ದಳು. ಜನರ ದಂಡೇ ಇಲ್ಲಿ ನೆರೆದಿದ್ದರಿಂದ ಭದ್ರತಾ ಸಿಬ್ಬಂದಿಗೆ ಅವ್ರನ್ನು ನಿಯಂತ್ರಿಸೋದು ಕಷ್ಟವಾಗಿತ್ತು.ಈ ವೇಳೆ ಕತ್ರಿನಾ ಮೈ ಕೈ ಮುಟ್ಟಿದ್ದರಂತೆ ಕೆಲವರು.

ನಟಿ ಸುಷ್ಮಿತಾ ಸೇನ್ ಕೂಡ ಕಿರುಕುಳಕ್ಕೊಳಗಾಗಿದ್ದಾಳಂತೆ. ಈ ವಿಷ್ಯವನ್ನು ಸುಷ್ಮಿತಾ ಎಲ್ಲರ ಮುಂದೆ ಹೇಳಿದ್ದಳು. ಪುಣೆಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋದ ವೇಳೆ ಜನರು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಸುಷ್ಮಿತಾ ಹೇಳಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...