alex Certify
ಕನ್ನಡ ದುನಿಯಾ       Mobile App
       

Kannada Duniya

‘ಜೈಲು’ ಪಾಲಾಗುವ ಭೀತಿಯಲ್ಲಿ ಖ್ಯಾತ ನಿರ್ದೇಶಕ…!

ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಗೆ ಶೋಕಾಸ್ ನೋಟಿಸ್ ನೀಡಿದೆ. ರಿಯಾಲಿಟಿ ಶೋ ಒಂದರಲ್ಲಿ ತಂಬಾಕು ಸೇವನೆಯನ್ನು ಪ್ರೋತ್ಸಾಹಿಸಿದ್ದರಿಂದ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್, ವಿತರಕರು, ಕಾರ್ಯಕ್ರಮದ ತೀರ್ಪುಗಾರರು ಮತ್ತು ಟಿವಿ ವಾಹಿನಿಯ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿರುವ ‘ಇಂಡಿಯಾಸ್ ನೆಕ್ಸ್ಟ್ ಸೂಪರ್ ಸ್ಟಾರ್ಸ್’ ಅನ್ನೋ ಕಾರ್ಯಕ್ರಮದಲ್ಲಿ ‘ಕಮ್ಲಾ ಪಸಂದ್’ ಅನ್ನೋ ಪಾನ್ ಮಸಾಲಾ ಬ್ರಾಂಡ್ ನ ಪ್ರಮೋಷನ್ ಮಾಡಲಾಗಿದೆ. ಈ ಕಾರ್ಯಕ್ರಮ ಭಾರತದಾದ್ಯಂತ ಪ್ರಸಾರವಾಗಿದ್ದು, ತಂಬಾಕು ಸೇವನೆಯನ್ನು ಪ್ರಮೋಟ್ ಮಾಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

COTPA 2003 ಕಾನೂನಿನ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 10 ದಿನಗಳಲ್ಲಿ ಉತ್ತರಿಸುವಂತೆ ಕರಣ್ ಜೋಹರ್ ಹಾಗೂ ಧರ್ಮಾ ಪ್ರೊಡಕ್ಷನ್ಸ್ ಗೆ ನೋಟಿಸ್ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...