alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಗಾಗಿ ಶಾರುಖ್ ಚಿತ್ರ ಬಿಟ್ಟ ದೀಪಿಕಾ?

deepika-padukone-shah-rukh-khan-120417

ಕಾಲ ಬದಲಾದಂತೆ ಮನುಷ್ಯ ಬದಲಾಗ್ತಾನೆ. ಯಶಸ್ಸು ಬೆನ್ನು ಹತ್ತಿದಾಗ ಮೊದಲ ಮೆಟ್ಟಿಲು ಮರೆತು ಹೋಗುತ್ತೆ. ಇದಕ್ಕೆ ಬಾಲಿವುಡ್ ಹೊರತಾಗಿಲ್ಲ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದ ಬೆಡಗಿ ದೀಪಿಕಾ ಪಡುಕೋಣೆ ಉತ್ತಮ ಉದಾಹರಣೆ.

ಕನ್ನಡದಲ್ಲಿ ಮೊದಲ ಸಿನಿಮಾ ಮಾಡಿದ್ರೂ ಶಾರುಖ್ ಜೊತೆ ನಟಿಸಿದ ಓಂ ಶಾಂತಿ ಓಂ ತನ್ನ ವೃತ್ತಿಯ ಮೊದಲ ಚಿತ್ರ ಎಂದವಳು ದೀಪಿಕಾ. ಈಗ ವೃತ್ತಿಗೆ ಬ್ರೇಕ್ ನೀಡಿದ ಶಾರುಖ್ ಜೊತೆ ನಟಿಸೋದಿಲ್ಲ ಎಂದಿದ್ದಾಳೆ. ಪದ್ಮಾವತಿ ಚಿತ್ರದಲ್ಲಿ ಬ್ಯುಸಿ ಇರೋ ಕಾರಣ ಡೇಟ್ ನೀಡೋಕೆ ಸಾಧ್ಯವಿಲ್ಲ ಎನ್ನುವ ಮೂಲಕ ಶಾರುಖ್ ಜೊತೆ ಅಭಿನಯಿಸಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.

ತನು ವೆಡ್ಸ್ ಮನು ಚಿತ್ರದ ನಿರ್ದೇಶಕ ಆನಂದ್ ಎಲ್ ರಾಯ್ ಶಾರುಖ್ ಹಾಗೂ ದೀಪಿಕಾ ಜೊತೆ ಒಂದು ಚಿತ್ರ ಮಾಡುವ ಮನಸ್ಸು ಮಾಡಿದ್ರಂತೆ. ಶಾರುಖ್ ಇದಕ್ಕೆ ಒಪ್ಪಿಗೆ ನೀಡಿ ಆನಂದ್ ಗೆ ದಿನಾಂಕ ಕೂಡ ನೀಡಿದ್ದರಂತೆ. ಆದ್ರೆ ದೀಪಿಕಾ ಎಲ್ಲ ಕನಸನ್ನು ಭಗ್ನಗೊಳಿಸಿದ್ದಾಳೆ.’

ಪದ್ಮಾವತಿ ಶೂಟಿಂಗ್ ಡೇಟ್ ಹಾಗೂ ಆನಂದ್ ನೀಡಿರುವ ಡೇಟ್ ಒಂದೇ ಆಗಿರುವುದರಿಂದ ಸಿನಿಮಾಕ್ಕೆ ಸಹಿ ಹಾಕಲ್ಲ ಎಂದಿದ್ದಾಳೆ ದೀಪಿಕಾ. ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್, ರಣವೀರ್ ಸಿಂಗ್ ಕೂಡ ನಟಿಸ್ತಾ ಇದ್ದು, ಪದ್ಮಾವತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾಳಂತೆ ದೀಪಿಕಾ. ಕೇವಲ ಡೇಟ್ ಸಮಸ್ಯೆಯಿಂದ ದೀಪಿಕಾ ಶಾರುಖ್ ಚಿತ್ರ ಬಿಟ್ಟಿಲ್ಲ. ಇದ್ರ ಹಿಂದೆ ಬೇರೆ ಕಾರಣ ಇದೆ ಎನ್ನುತ್ತಿರುವ ಬಾಲಿವುಡ್ ರಣವೀರ್ ಸಿಂಗ್ ನನ್ನು ಅನುಮಾನದ ದೃಷ್ಟಿಯಲ್ಲಿ ನೋಡ್ತಾ ಇದೆ.

ಹಾಗೆ ಶಾರುಖ್ ದೀಪಿಕಾ ಹೇಳಿಕೆಗೆ ಬೇಸರಗೊಂಡಿದ್ದಾರೆ. ಕತ್ರಿನಾ ಹಾಗೂ ದೀಪಿಕಾ ನಟಿಸಬೇಕಾಗಿದ್ದ ಚಿತ್ರದಲ್ಲಿ ದೀಪಿಕಾ ಬದಲು ಬೇರೆ ನಟಿಯರ ಹುಡುಕಾಟ ಶುರುವಾಗಿದೆ. ಚಿತ್ರದಲ್ಲಿ ಶಾರುಖ್ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಇತ್ತೀಚಿನ ಚಿತ್ರಗಳು ಹೇಳುವಷ್ಟು ಹಿಟ್ ಆಗಲಿಲ್ಲ ಎನ್ನುವ ಕಾರಣಕ್ಕೆ ದೀಪಿಕಾ ಚಿತ್ರಕ್ಕೆ ಸಹಿ ಹಾಕಿಲ್ಲ ಎಂಬ ಮಾತುಗಳೂ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...