alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ರಣವೀರ್ ಫೋಟೋಗೆ ದೀಪಿ ಫಿದಾ

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಮೆಂಟ್ ಮಾಡ್ತಿರುತ್ತಾರೆ. ಇವ್ರ ಕಮೆಂಟ್ ಸಾವಿರಾರು ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಈಗ ಮತ್ತೆ ರಣವೀರ್ ಸಿಂಗ್ ಫೋಟೋಕ್ಕೆ ದೀಪಿ ಕಮೆಂಟ್ ಮಾಡಿ ಸುದ್ದಿಗೆ ಬಂದಿದ್ದಾಳೆ.

ಸೋಮವಾರ ರಣವೀರ್ ಕಪೂರ್ ನೀಲಿ ಬಣ್ಣದ ಸೂಟ್ ನಲ್ಲಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾನೆ. ಈ ಫೋಟೋಕ್ಕೆ ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದ್ರಲ್ಲಿ ದೀಪಿಕಾ ಕೂಡ ಹಿಂದೆ ಬಿದ್ದಿಲ್ಲ. ರಣವೀರ್ ಫೋಟೋಕ್ಕೆ “Monday Blues?” ಎಂದು ಶೀರ್ಷಿಕೆ ಹಾಕಿದ್ದಾನೆ. ಇದಕ್ಕೆ ದೀಪಿಕಾ “uffff!!!never!!!?” ಎಂದು ಕಮೆಂಟ್ ಮಾಡಿದ್ದಾಳೆ.

ರಣವೀರ್ ಹಾಗೂ ದೀಪಿಕಾ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂಬ ಸುದ್ದಿಯಿದೆ. ಈ ಬಗ್ಗೆ ಕಲಾವಿದರು ಅಧಿಕೃತ ಹೇಳಿಕೆ ನೀಡಿಲ್ಲ. ಕೆಲ ದಿನಗಳ ಹಿಂದಷ್ಟೇ ಫ್ಲೋರಿಡಾಕ್ಕೆ ತೆರಳಿ ರಹಸ್ಯ ರಜೆ ಎಂಜಾಯ್ ಮಾಡಿ ಬಂದಿದ್ದಾರೆ. ಸದ್ಯ ರಣವೀರ್ ಗಲ್ಲಿ ಭಾಯ್, ಸಿಂಬಾ ಹಾಗೂ 83 ಚಿತ್ರಗಳಲ್ಲಿ ನಟಿಸುತ್ತಿದ್ದಾನೆ. ದೀಪಿಕಾ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...