alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾರ ಈ ಫೋಟೊಗಳು ನಿಮ್ಮ ಎದೆಬಡಿತ ಹೆಚ್ಚಿಸುವುದು ಪಕ್ಕಾ…!

ತಮ್ಮ ಅಮೋಘ ಲುಕ್ ನಿಂದ ದೀಪಿಕಾ ಪಡುಕೋಣೆ ಯಾವುದೇ ಮ್ಯಾಗಜೀನ್ ಕವರ್ ಪೇಜ್ ನ ಅಂದ ಹೆಚ್ಚಿಸಬಲ್ಲರು. ದೇಶದ ಯುವಜನರ ಮನಕದ್ದಿರುವ ಬಾಲಿವುಡ್ ನಟಿ ಒಂದು ಮ್ಯಾಗಜೀನ್ ಕವರ್ ಪೇಜ್ ನಲ್ಲಿ ಕಾಣಿಕೊಂಡು ಸುದ್ದಿಯಾಗಿದ್ದರೆ.

ಇದರಲ್ಲಿರುವ ಫೋಟೊಗಳು ನಿಮ್ಮ ಎದೆಬಡಿತ ಹೆಚ್ಚುಸುವುದಂತೂ ಗ್ಯಾರಂಟಿ. ಎಲ್ಲ್ ಗ್ಲಾಮರ್ ಮ್ಯಾಗಜೀನ್ ನಲ್ಲಿ ದೀಪಿಕಾರ ಕವರ್ ಸ್ಟೋರಿ, ಫೋಟೊಗಳು ಪ್ರಕಟವಾಗಿದ್ದು, ತಮ್ಮ ವೃತ್ತಿ ಜೀವನ ಹಿನ್ನೆಲೆ, ತಾವು ಬಾಲಿವುಡ್ ಗೆ ಬಂದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ದೀಪಿಕಾ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಮ್ಯಾಗಜೀನ್, “ರಾಷ್ಟ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ, ಪ್ರಶಸ್ತಿ ಪುರಸ್ಕೃತ ನಟಿ, ಮಾನಸಿಕ ಆರೋಗ್ಯ ಅಭಿಯಾನ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಸ್ಟೈಲ್ ಐಕಾನ್ ದೀಪಿಕಾ ಪಡುಕೋಣೆ ತಾವಂದುಕೊಂಡಂತೆಯೇ ಜೀವನ ನಡೆಸುತ್ತಿದ್ದಾರೆ ” ಎಂದಿದೆ.

ಹೊಳೆಯುವ ಜುಕ್ಕೆಗಳಿರುವ, ಕಪ್ಪು ಬಣ್ಣದ ತುಸು ಚಿಕ್ಕ ಡ್ರೆಸ್ ಹಾಕಿರುವ ದೀಪಿಕಾ, ವಿಂಗ್ಡ್ ಐಲೈನರ್ ಜತೆಗೆ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸಿ ನೆಕ್ಲೇಸ್, ಕಿವಿಯೋಲೆ ಜತೆಗೆ ಕಾಣಿಸಿಕೊಂಡಿರುವ ದೀಪಿಕಾ ಫೋಟೊಗಳು ಎಂಥವರಲ್ಲೂ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುತ್ತವೆ.

ಭಾರತೀಯ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಯವರ ಪುತ್ರಿಯಾಗಿರುವ ದೀಪಿಕಾ, ರಾಷ್ಟ್ರ ಮಟ್ಟದಲ್ಲಿ ಒಮ್ಮೆ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಲವ್ ಆಜ್ ಕಲ್, ಪೀಕು ಸೇರಿ ಅನೇಕ ಯಶಸ್ವಿ ಸಿನಿಮಾಗಳ ನಂತರ ಇತ್ತೀಚಿನ ಪದ್ಮಾವತ್ ವರೆಗೆ ದೀಪಿಕಾ ಪಯಣ ಅದ್ಭುತ. ಬಾಲಿವುಡ್ ನಟ ರಣವೀರ್ ಜತೆ ಇಟಲಿಯ ಬಳಿಯಿರುವ ಡಿಸ್ಟಾಂಟ್ ಕಾಮೊ ಎಂಬ ಸಣ್ಣ ಸುಂದರ ‌ನಗರದಲ್ಲಿ ನ.10 ಕ್ಕೆ ದೀಪಿಕಾ ಸಪ್ತಪದಿ ತುಳಿಯುತ್ತಾರೆ ಎಂಬ ಸುದ್ದಿಗಳಿವೆ.

ಕುಟುಂಬಸ್ಥರಿಗೆಂದೇ ನಡೆಯುವ ಅತ್ಯಂತ ಗೌಪ್ಯ ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಕೈನಲ್ಲೂ ಕ್ಯಾಮೆರಾ ಮೊಬೈಲ್ ಇರುವಂತಿಲ್ಲ ಎಂಬ ನಿಬಂಧನೆಯನ್ನೂ ಹಾಕಲಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...