alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ದೀಪಿಕಾಳಲ್ಲಿ ಇಷ್ಟವಾಗದೇ ಇರೋದು ಏನ್ ಗೊತ್ತಾ?

ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ ನ ನಂಬರ್ ವನ್ ನಟಿ. ನಟನೆ ಮಾತ್ರವಲ್ಲ ದೀಪಿಕಾಳ ಫ್ಯಾಷನ್ ಸೆನ್ಸ್ ಬಗ್ಗೆಯಂತೂ ಎರಡು ಮಾತಿಲ್ಲ. ಹೊಸ ಬಗೆಯ ಉಡುಪುಗಳಲ್ಲಿ ಆಕೆ ಮಿಂಚ್ತಾಳೆ.

ಅಭಿಮಾನಿಗಳಿಗೂ ದೀಪಿಕಾಳ ಡ್ರೆಸ್ ಸೆಲೆಕ್ಷನ್ ಸಖತ್ ಇಷ್ಟವಾಗಿದೆ. ಆದ್ರೆ ಕೇಶ ವಿನ್ಯಾಸ ಸರಿಯಾಗಿಲ್ಲ ಅನ್ನೋದು ಅಭಿಮಾನಿಗಳ ಕಂಪ್ಲೇಂಟ್. ಕಾರ್ಯಕ್ರಮವೊಂದರಲ್ಲಿ ದೀಪಿಕಾ ಅಚ್ಚ ಬಿಳಿ ಬಣ್ಣದ ಡ್ರೆಸ್ ತೊಟ್ಟಿದ್ದರು.

❤️

A post shared by Deepika Padukone (@deepikapadukone) on

ಆದ್ರೆ ಮತ್ತದೇ ಹಳೆಯ ಹೇರ್ ಸ್ಟೈಲ್ ದೀಪಿಕಾಳ ನ್ಯೂ ಲುಕ್ ಗೆ ಕಪ್ಪುಚುಕ್ಕೆಯಂತಿತ್ತು. ಪದೇ ಪದೇ ಇದೇ ಹೇರ್ ಸ್ಟೈಲ್ ನೋಡಿ ಬೇಜಾರಾಗಿದೆ ಅಂತಾ ಅಭಿಮಾನಿಗಳೇ ಹೇಳ್ತಿದ್ದಾರೆ.

ದಯವಿಟ್ಟು ಈ ಹೇರ್ ಸ್ಟೈಲ್ ಸಾಕು, ಹೊಸತೇನಾದ್ರೂ ಟ್ರೈ ಮಾಡಿ ಅಂತಾ ದೀಪಿಗೆ ಜಾಲತಾಣಗಳಲ್ಲಿ ಸಲಹೆ ಕೊಟ್ಟಿದ್ದಾರೆ. ಗೇಬ್ರಿಯಲ್ ಜಾರ್ಜಿಯೋ ದೀಪಿಕಾಗೆ ಈ ಹೇರ್ ಸ್ಟೈಲ್ ಮಾಡಿದ್ದಾಳೆ.

Starting the day with some magic ✨✨✨ @deepikapadukone

A post shared by Shaleena Nathani (@shaleenanathani) on

ದೀಪಿಕಾ ಕೇಶ ವಿನ್ಯಾಸಕನನ್ನು ಬದಲಾಯಿಸ್ತಾಳೋ ಅಥವಾ ಹೊಸ ಹೊಸ ಹೇರ್ ಸ್ಟೈಲ್ ಟ್ರೈ ಮಾಡ್ತಾಳೋ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ. ಈ ಹಿಂದೆ ಕೂಡ ಹಲವು ಬಾರಿ ದೀಪಿಕಾ ಇದೇ ಹೇರ್ ಸ್ಟೈಲ್ ರಿಪೀಟ್ ಮಾಡಿದ್ದಾರೆ.

ಸೀರೆ, ಗೌನ್, ಚಿಕ್ ಲುಕ್ ಎಲ್ಲದಕ್ಕೂ ಇದೇ ರೀತಿ ಜೆಲ್ ಹಾಕಿ ಕೂದಲನ್ನು ಗಂಟು ಕಟ್ಟಿಕೊಂಡಿದ್ದನ್ನು ಗಮನಿಸಿಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...