alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಇಂಥ ಪಾತ್ರದಲ್ಲಿ ನಟಿಸಲ್ವಂತೆ ದೀಪಿಕಾ

ಪದ್ಮಾವತ್ ಚಿತ್ರಕ್ಕೆ ವ್ಯಕ್ತವಾದ ತೀವ್ರ ವಿರೋಧ ಕಲಾವಿದರನ್ನು ಚಿಂತೆಗೀಡು ಮಾಡಿದೆ. ಡಿಸೆಂಬರ್ 1ಕ್ಕೆ ತೆರೆಗೆ ಬರಬೇಕಿದ್ದ ಚಿತ್ರ ಜನವರಿ 25ರಂದು ಬಿಡುಗಡೆಯಾಗಿದೆ. ಕರಣಿ ಸೇನೆ ಪ್ರತಿಭಟನೆಗೆ ಬೇಸತ್ತಿರುವ ರಾಣಿ ಪದ್ಮಾವತಿ ಪಾತ್ರದಲ್ಲಿ ಮಿಂಚಿದ್ದ ನಟಿ ದೀಪಿಕಾ ಪಡುಕೋಣೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇನ್ನೆಂದೂ ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಚ್ಚುವುದಿಲ್ಲ ಎಂದಿದ್ದಾಳೆ.

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದೀಪಿಕಾ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತ ಇಷ್ಟೆಲ್ಲ ಆದ್ಮೇಲೂ ಮತ್ತೆ ಐತಿಹಾಸಿಕ ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದಾಳೆ. ತಂದೆ-ತಾಯಿ ಬಗ್ಗೆ ಮಾತನಾಡಿದ ದೀಪಿಕಾ ನನ್ನ ಕೆಲಸಕ್ಕೆ ಅಪ್ಪ-ಅಮ್ಮ ಬೆಂಬಲ ನೀಡಿದ್ದಾರೆ. ಸ್ಕ್ರೀನಿಂಗ್ ನಂತ್ರ ವಿಡಿಯೋ ಕಾಲ್ ಮಾಡಿ ನನ್ನ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ವಿಶ್ವಾಸ ತುಂಬಿದ್ರು ಎಂದಿದ್ದಾರೆ.

ಖಿಲ್ಜಿ ಹಾಗೂ ರಾಜನ ನಡುವೆ ನಡೆಯುವ ಯುದ್ಧ ದೀಪಿಕಾ ಅಚ್ಚುಮೆಚ್ಚಿನ ದೃಶ್ಯವಂತೆ. ಇಬ್ಬರು ಹೀರೋ ಮಧ್ಯೆ ನಿಜವಾಗ್ಲೂ ಯುದ್ಧ ನಡೆಯುತ್ತಿದೆಯೇನೋ ಎನ್ನುವ ಹಾಗೆ ಅಭಿನಯಿಸಿದ್ದಾರೆಂದು ದೀಪಿಕಾ ಹೇಳಿದ್ದಾಳೆ. ದೀಪಿಕಾ ನಟನೆಗೆ ಬಾಲಿವುಡ್ ನ ಅನೇಕರು ಫುಲ್ ಮಾರ್ಕ್ಸ್ ನೀಡಿದ್ದು, ಪದ್ಮಾವತ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...