alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಣದ ಪ್ರತಿಮೆಯಾಗಲಿದ್ದಾಳೆ ಬೆಂಗಳೂರಿನ ಬೆಡಗಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಯಾಗಲಿದ್ದಾಳೆ. ಲಂಡನ್ ಹಾಗೂ ದೆಹಲಿ ಮ್ಯೂಸಿಯಂನಲ್ಲಿ ಹಿರಿಯ ನಟರ ಜೊತೆ ದೀಪಿಕಾ ಪ್ರತಿಮೆ ಅನಾವರಣಗೊಳ್ಳಲಿದೆ. ಈ ಸಂಬಂಧ ಸೋಮವಾರ ಮಾಹಿತಿ ನೀಡಲಾಗಿದೆ.

ಲಂಡನ್ ನಲ್ಲಿ 2019ರ ಆರಂಭದಲ್ಲಿ ದೀಪಿಕಾ ಮೇಣದ ಪ್ರತಿಮೆ ಪ್ರವಾಸಿಗರನ್ನು ಸೆಳೆಯಲು ಸಿದ್ಧವಾಗಲಿದೆ. ಕೆಲ ತಿಂಗಳ ನಂತ್ರ ದೆಹಲಿ ವಸ್ತುಸಂಗ್ರಹಾಲಯದಲ್ಲಿ ದೀಪಿಕಾ ಕಾಣಿಸಲಿದ್ದಾಳೆ. ಕಲಾವಿದರ ತಂಡ ಲಂಡನ್ ನಲ್ಲಿ ದೀಪಿಕಾ ಭೇಟಿ ಮಾಡಿ ಅಳತೆ ತೆಗೆದುಕೊಂಡಿದೆ. ಇನ್ನೂರಕ್ಕೂ ಹೆಚ್ಚು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ.

ತಜ್ಞರ ತಂಡವನ್ನು ಭೇಟಿ ಮಾಡಿದ ದೀಪಿಕಾ ತುಂಬಾ ಖುಷಿಯಾಗಿದ್ದಾಳಂತೆ. ನನ್ನ ಮೇಣದ ಪ್ರತಿಮೆ ನೋಡಲು ನಾನು ಉತ್ಸುಕನಾಗಿದ್ದೇನೆಂದು ದೀಪಿಕಾ ಹೇಳಿದ್ದಾಳೆ. ತಜ್ಞರ ತಂಡ ಕೂಡ ಈ ಬಗ್ಗೆ ಖುಷಿ ವ್ಯಕ್ತಪಡಿಸಿದೆ. ದೀಪಿಕಾ ಪ್ರತಿಭಾವಂತ ನಟಿಯಾಗಿದ್ದು, ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ತಂಡ ಹೇಳಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...