alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ ದೀಪಿಯವನಂತೆ ರಣವೀರ್ ಸಿಂಗ್…!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಪ್ರೀತಿ, ಮದುವೆ ವಿಚಾರ ಆಗಾಗ ಸುದ್ದಿಗೆ ಬರ್ತಿರುತ್ತದೆ. ರಣವೀರ್ ಹಾಗೂ ದೀಪಿಕಾ ಈವರೆಗೂ ತಮ್ಮಿಬ್ಬರ ಮಧ್ಯೆ ಪ್ರೀತಿಯಿದೆ ಎಂಬುದನ್ನು ಬಾಯ್ಬಿಟ್ಟು ಹೇಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಇಬ್ಬರೂ ಪರಸ್ಪರ ಫೋಟೋಗಳಿಗೆ ಕಮೆಂಟ್ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ.

ರಣವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಾಕಿದ್ದಾರೆ. ಎಂದಿನಂತೆ ಸುಂದರವಾಗಿ ಕಾಣುವ ರಣವೀರ್ ಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ. ಈವರೆಗೆ 1,579,405 ಮಂದಿ ಫೋಟೋವನ್ನು ಲೈಕ್ ಮಾಡಿದ್ದಾರೆ. ರಣವೀರ್ ಸಿಂಗ್ ಫೋಟೋಕ್ಕೆ ದೀಪಿಕಾ ಪಡುಕೋಣೆ ಕೂಡ ಕಮೆಂಟ್ ಮಾಡಿದ್ದಾಳೆ. ರಣವೀರ್ ಹಾಗೂ ಅಭಿಮಾನಿಗಳು ದೀಪಿ ಕಮೆಂಟ್ ನೋಡಿ ಖುಷಿಯಾಗಿದ್ದಾರೆ.

ರಣವೀರ್ ಫೋಟೋ ನೋಡಿ ಪ್ರೀತಿ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗದ ದೀಪಿಕಾ ರಣವೀರ್ ನನ್ನವನು ಎಂದು ಕಮೆಂಟ್ ಮಾಡಿದ್ದಾಳೆ.

ನವೆಂಬರ್ ನಲ್ಲಿ ರಣವೀರ್ ಹಾಗೂ ದೀಪಿಕಾ ಮದುವೆಯಾಗ್ತಾರೆ ಎನ್ನುವ ಸುದ್ದಿಯಿದೆ. ಮದುವೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆಯಂತೆ. ಇದೇ ಕಾರಣಕ್ಕೆ ಯಾವುದೇ ಚಿತ್ರಕ್ಕೆ ದೀಪಿಕಾ ಸಹಿ ಹಾಕಿಲ್ಲ ಎಂಬ ಮಾತೂ ಕೇಳಿ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...