alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದಂದು ಎಂಗೇಜ್ ಆಗಲಿದ್ದಾಳೆ ದೀಪಿಕಾ..?

ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕೇಳಿ ಬರ್ತಿದೆ. ದೀಪಿಕಾ ಪಡುಕೋಣೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾಳೆ ಎನ್ನಲಾಗ್ತಿದೆ. ಶ್ರೀಲಂಕಾದಲ್ಲಿ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಜೊತೆ ಹೊಸ ವರ್ಷವನ್ನು ಸ್ವಾಗತಿಸಿರುವ ದೀಪಿ ಶೀಘ್ರವೇ ಎಂಗೇಜ್ ಆಗಲಿದ್ದಾಳಂತೆ.

ದೀಪಿಕಾ ಇದೇ ಜನವರಿ 5ರಂದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾಳೆ. ಮೂಲಗಳ ಪ್ರಕಾರ ದೀಪಿಕಾ ಹುಟ್ಟು ಹಬ್ಬದಂದೆ ನಟ ರಣವೀರ್ ಸಿಂಗ್ ಕೈಗೆ ಉಂಗುರ ತೊಡಿಸಲಿದ್ದಾಳೆ ಎನ್ನಲಾಗ್ತಿದೆ. ಹುಟ್ಟುಹಬ್ಬವನ್ನೂ ಶ್ರೀಲಂಕಾದಲ್ಲಿಯೇ ಆಚರಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಅಲ್ಲಿಯೇ ಇಬ್ಬರು ಎಂಗೇಜ್ ಆಗಲಿದ್ದಾರೆಂದು ಮೂಲಗಳು ಹೇಳ್ತಿವೆ.

ರಣವೀರ್ ಹಾಗೂ ದೀಪಿಕಾ ಶೀಘ್ರವೇ ಮದುವೆ ಆಗಲಿದ್ದಾರೆನ್ನುವ ಮಾತೂ ಕೇಳಿ ಬರ್ತಿದೆ. ಈಗಾಗಲೇ ರಣವೀರ್ ದೀಪಿಕಾ ಕುಟುಂಬಸ್ಥರನ್ನು ಭೇಟಿಯಾಗಿದ್ದಾನೆ. ಬೆಂಗಳೂರಿನಲ್ಲಿಯೇ ಜೋಡಿ ಹೊಸ ವರ್ಷವನ್ನು ಸ್ವಾಗತಿಸಬೇಕಿತ್ತು. ಆದ್ರೆ ಪ್ಲಾನ್ ಬದಲಾಯಿಸಿ ಶ್ರೀಲಂಕಾಕ್ಕೆ ಹೋಗಿದ್ದಾರೆ.

ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ತಾವಿಬ್ಬರು ಪ್ರೀತಿಸುತ್ತಿದ್ದೇವೆಂದು ಇನ್ನೂ ಜೋಡಿ ಬಹಿರಂಗವಾಗಿ ಹೇಳಿಲ್ಲ. ಆದ್ರೆ ಅವ್ರ ನಡೆ-ನುಡಿ ಇಬ್ಬರ ನಡುವೆ ಏನೇನೋ ಇದೆ ಎಂಬುದನ್ನು ಸಾರಿ ಹೇಳುತ್ತದೆ. ನಾವಿಬ್ಬರು ಒಟ್ಟಿಗಿದ್ರೆ ನಮಗೆ ಮತ್ತೇನೂ ಕಾಣುವುದಿಲ್ಲವೆಂದು ಈ ಹಿಂದೆ ದೀಪಿ ಹೇಳಿದ್ದಳು. ಏನೇ ಇರಲಿ, ಶೀಘ್ರ ಇಬ್ಬರು ಮದುವೆ ಸುದ್ದಿ ಕೊಡಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...