alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿದೆ ದೀಪಿಕಾ ಬೆರಳಲ್ಲಿರೋ ಉಂಗುರ

ಬಹಳ ದಿನಗಳ ಕಾಯುವಿಕೆಯ ನಂತರ ಇವತ್ತು ದೀಪಿಕಾ ಅಭಿಮಾನಿಗಳಿಗೆ ಪದ್ಮಾವತಿ ಫಸ್ಟ್ ಲುಕ್ ದರ್ಶನವಾಗಿದೆ. ರಿಯಲ್ ಲೈಫ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಈ ಚಿತ್ರದಲ್ಲಿ ಜೋಡಿಯಾಗಿಲ್ಲ ಅನ್ನೋದೇ ಅಭಿಮಾನಿಗಳ ಬೇಸರಕ್ಕೆ ಕಾರಣ.

ಆದ್ರೆ ಅಭಿಮಾನಿಗಳ ಮೂಡ್ ಸರಿಮಾಡುವಂಥ ಸುದ್ದಿಯೊಂದಿದೆ. ಪದ್ಮಾವತಿ ಶೂಟಿಂಗ್ ಮುಗಿಸಿರೋ ದೀಪಿ ಸದ್ಯ ಬೆಂಗಳೂರಲ್ಲಿ ಕುಟುಂಬದವರೊಂದಿಗೆ ಟೈಮ್ ಸ್ಪೆಂಡ್ ಮಾಡ್ತಿದ್ದಾಳೆ. ಕೆಲ ದಿನಗಳ ಹಿಂದಷ್ಟೆ ಲಂಡನ್ ನಲ್ಲೂ ರಜೆಯ ಮಜಾ ಅನುಭವಿಸಿದ್ದಳು.

ರಣವೀರ್ ಕೂಡ ಹೈಪ್ರೊಫೆಲ್ ಮದುವೆಯೊಂದಕ್ಕೆ ಅಟೆಂಡ್ ಆಗಿದ್ರು. ಲಂಡನ್ ನಲ್ಲಿ ಸಹೋದರಿ ಜೊತೆ ಕಾಮಿಡಿ ಶೋ ಒಂದರ ಭಾಗವಾಗಿದ್ದ ದೀಪಿಕಾ, ಎಲ್ಲರ ಗಮನ ಸೆಳೆದಿದ್ದಾಳೆ. ದೀಪಿಕಾಳ ಕೈಯಲ್ಲಿ ಮಿನುಗ್ತಾ ಇದ್ದ ಉಂಗುರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ದೀಪಿಕಾ ಕೈಯಲ್ಲಿ ದಿಢೀರ್ ಅಂತಾ ಉಂಗುರ ಪ್ರತ್ಯಕ್ಷವಾಗಿರೋದು ಹೇಗೆ? ರಣವೀರ್, ದೀಪಿಕಾ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಅನ್ನೋ ಊಹಾಪೋಹ ಹರಿದಾಡಲು ಆರಂಭಿಸಿದೆ. ಕೆಲ ದಿನಗಳ ಹಿಂದಷ್ಟೆ ಪಾರ್ಟಿಯೊಂದರಲ್ಲಿ ಸಖತ್ ಕ್ಲೋಸಾಗಿದ್ದ ರಣವೀರ್, ದೀಪಿಕಾ ವಿಡಿಯೋ ಕೂಡ ವೈರಲ್ ಆಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...