alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಅಮಲಿನಲ್ಲಿ ಹೀಗೆ ಮಾಡಿದ್ದಾರಾ ದೀಪಿಕಾ..?

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಹಾಲಿವುಡ್ ನಲ್ಲೂ ತಮ್ಮ ಮಿಂಚು ಹರಿಸುತ್ತಿದ್ದಾರೆ. ಸದ್ಯ ಸಂಜಯ್ ಲೀಲಾ ಬನ್ಸಾಲಿಯ ಬಾಲಿವುಡ್ ಚಿತ್ರ ‘ಪದ್ಮಾವತಿ’ ಕುರಿತು ದೀಪಿಕಾ ಆಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಈ ಚಿತ್ರ ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಗೆ ವಿವಾದವನ್ನು ಹುಟ್ಟು ಹಾಕಿದೆ.

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹೀದ್ ಕಪೂರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಫರ್ಸ್ಟ್ ಸಾಂಗ್ ಬಿಡುಗಡೆಯಾದ 24 ಗಂಟೆಗಳಲ್ಲೇ 10 ಮಿಲಿಯನ್ ಮಂದಿ ವೀಕ್ಷಿಸುವ ಮೂಲಕ ದಾಖಲೆ ಬರೆದಿದೆ.

‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಪೂರ್ವಭಾವಿಯಾಗಿ ದೀಪಿಕಾ ಪಡುಕೋಣೆ ಚಿತ್ರೋದ್ಯಮದ ಸ್ನೇಹಿತರು ಹಾಗೂ ಅತ್ಮೀಯರಿಗೆ ಮನೆಯಲ್ಲೇ ಪಾರ್ಟಿಯನ್ನೆರ್ಪಡಿಸಿದ್ದು, ಈ ಪಾರ್ಟಿಯ ಹಲವು ಫೋಟೋಗಳ ಪೈಕಿ ವೈರಲ್ ಆಗಿರುವ ಫೋಟೋವೊಂದು ಟೀಕೆಗೆ ಕಾರಣವಾಗಿದೆ.

ಆರ್ಮಾನ್ ಜೈನ್ ಹಾಗೂ ಆಧಾರ್ ಜೈನ್ ಜೊತೆಗೆ ಅತ್ಮೀಯ ಭಂಗಿಯಲ್ಲಿರುವ ಫೋಟೋವನ್ನು ಆಧಾರ್ ಜೈನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವುದು ಗಮನಾರ್ಹ. ಇವರಿಬ್ಬರು ದೀಪಿಕಾಳ ಮಾಜಿ ಗೆಳೆಯ ರಣಬೀರ್ ಕಪೂರ್ ಸಂಬಂಧಿಗಳೆನ್ನಲಾಗಿದ್ದು, ಬೇಕೆಂದೇ ದೀಪಿಕಾ ಇವರಿಬ್ಬರ ಜೊತೆ ಅತ್ಮೀಯವಾಗಿ ವರ್ತಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಇನ್ ಸ್ಟಾಗ್ರಾಂನಲ್ಲಿ ಹಲವರು ಇದೇ ತೆರನಾದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕುಡಿದ ಮತ್ತಿನಲ್ಲಿ ದೀಪಿಕಾ ಈ ರೀತಿ ವರ್ತಿಸಿದ್ದಾರೆಂದು ಟೀಕೆ ಮಾಡಿದ್ದಾರೆ.

ಈ ಹಿಂದೆಯೂ ಕರಣ್ ಜೋಹರ್ ಹಾಗೂ ಸಿದ್ದಾರ್ಥ್ ಮಲೋತ್ರಾ ಜೊತೆಗಿನ ದೀಪಿಕಾ ಫೋಟೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಆಗಲೂ ದೀಪಿಕಾ ಮದ್ಯದ ಅಮಲಿನಲ್ಲಿದ್ದಾರೆಂದು ಟೀಕಿಸಿದ್ದನ್ನಿಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...