alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾರ ಹಾಟ್ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ತಮ್ಮ ನೈಜ ನಟನೆಯ ಮೂಲಕವೇ ಅಭಿಮಾನಿಗಳ ಗೆದ್ದ ನಟಿ. ಸದ್ಯ ಈ ನಟಿ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ದೀಪಿಕಾ ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿದ ಕ್ಯೂಟ್ ಫೋಟೋ ಸಖತ್ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ತನ್ನ ತಂಗಿ ಅನಿಶಾ ಹಾಗೂ ಪ್ರಿಯಕರ ರಣವೀರ್ ಸಿಂಗ್ ಜೊತೆ ಅಮೆರಿಕಾ ಪ್ರವಾಸದಲ್ಲಿದ್ದಾರೆ. ನೀಲಿ ಹಾಗೂ ಬಿಳಿ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಿರುವ ದೀಪಿಕಾ, ಸೊಗಸಾದ ಡ್ರೆಸ್ ಹಾಕಿಕೊಂಡು ಅನಿಶಾ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಅಂದ ಹಾಗೆ ಈ ಫೋಟೋ ಸೆರೆ ಹಿಡಿದಿದ್ದು ರಣವೀರ್ ಸಿಂಗ್.

ದೀಪಿಕಾ ಪಡುಕೋಣೆ ವರ್ಷದ ಆರಂಭದಲ್ಲಿ ಪದ್ಮಾವತ್ ಚಿತ್ರದಲ್ಲಿ ಮನಮೋಹಕ ಅಭಿನಯದ ಮೂಲಕ ಅಭಿಮಾನಿಗಳ ದಿಲ್ ಗೆದ್ದಿದ್ದರು. ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ನಟಿ ಎಂಬ ಹೆಗ್ಗಳಿಕೆಯೂ ದೀಪಿಕಾರದ್ದಾಗಿದೆ. ರಣವೀರ್ ಜೊತೆಗೆ ದೀಪಿಕಾ ಇದೇ ವರ್ಷದ ನವೆಂಬರ್ ನಲ್ಲಿ ಸಪ್ತ ಪದಿ ತುಳಿಯುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...