alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಮುಂದೆ ಕಹಿ ಸತ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ರಣವೀರ್ ಸಿಂಗ್ ಜೊತೆ ಮದುವೆ ವಿಚಾರಕ್ಕೆ ಚರ್ಚೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಸುಂದರ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮಧ್ಯೆ ದೀಪಿಕಾ ಪಡುಕೋಣೆ ವಿಡಿಯೋ ಒಂದು ವೈರಲ್ ಆಗಿದೆ.

ದೀಪಿಕಾ ಪಡುಕೋಣೆ, ಫೇಸ್ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳ ಕಣ್ಣಲ್ಲೂ ನೀರು ಬರ್ತಿದೆ. ದೀಪಿಕಾ ತಮ್ಮ ಜೀವನದ ಕಹಿ ಸತ್ಯವನ್ನು ಎಲ್ಲರ ಮುಂದಿಟ್ಟಿದ್ದಾರೆ. ಖಿನ್ನತೆಗೊಳಗಾಗಿದ್ದ ಕೆಟ್ಟ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಒಂದು ಸಮಯದಲ್ಲಿ ದೀಪಿಕಾ ಪಡುಕೋಣೆಗೆ ಯಾರ ಜೊತೆಯೂ ಮಾತನಾಡುವ ಮನಸ್ಸಿರಲಿಲ್ಲವಂತೆ. ತನಗೆ ಏನಾಗ್ತಿದೆ ಎಂಬುದನ್ನು ಹೇಳಲೂ ಸಾಧ್ಯವಾಗ್ತಿರಲಿಲ್ಲವಂತೆ. ನನಗೇನಾಗ್ತಿದೆ ಎಂಬುದನ್ನು ಬೇರೆಯವರಿಗೆ ಹೇಳಿದ್ರೆ ಅವ್ರು ಅರ್ಥ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಎಲ್ಲರ ಮುಂದೆ ನಗ್ತಿದ್ದ ನನಗೆ ಒಳಗೆ ನೋವಾಗ್ತಾಯಿತ್ತು. ಖಿನ್ನತೆ ದಿನಗಳು ತುಂಬಾ ಕೆಟ್ಟದಾಗಿದ್ದವು. ಆದಷ್ಟು ಬೇಗ ಖಿನ್ನತೆಯಿಂದ ಹೊರಬರಲು ನಾನು ಬಯಸಿದ್ದೆ. ಖಿನ್ನತೆ ಅಂದ್ರೆ ಏನು ಎಂಬುದು ಅರ್ಥವಾಗುತ್ತಿದ್ದಂತೆ ನಾನು ಬಹುಬೇಗ ಅದ್ರಿಂದ ಹೊರಗೆ ಬಂದೆ ಎಂದು ದೀಪಿಕಾ ವಿಡಿಯೋದಲ್ಲಿ ಹೇಳಿದ್ದಾರೆ.

#NotAshamed

This my story and I am #NotAshamed

Posted by Deepika Padukone on Wednesday, October 10, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...