alex Certify
ಕನ್ನಡ ದುನಿಯಾ       Mobile App
       

Kannada Duniya

ಜೊತೆಯಾಗಿ ನಟಿಸಲು ನಿರಾಕರಿಸುವ ಮೂಲಕ ಪತಿಗೆ ‘ಶಾಕ್’ ಕೊಟ್ಟ ದೀಪಿಕಾ

ಕನ್ನಡತಿ ದೀಪಿಕಾ ಪಡುಕೋಣೆ ಕಳೆದ ತಿಂಗಳಷ್ಟೇ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬಹು ಕಾಲದಿಂದ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇಟಲಿಯಲ್ಲಿ ಸಪ್ತಪದಿ ತುಳಿದಿದ್ದು, ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ದೂರಿ ಪಾರ್ಟಿ ನೀಡಿದ್ದಾರೆ.

ವಿವಾಹಕ್ಕೂ ಮುನ್ನ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೊತೆ ‘ಪದ್ಮಾವತ್’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದು, ವಿವಾಹದ ಬಳಿಕವೂ ಈ ಜೋಡಿ ಮತ್ತೆ ತೆರೆ ಮೇಲೆ ಮಿಂಚಲಿ ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ರಣವೀರ್ ಸಿಂಗ್ ಜೊತೆ ನಟಿಸಲು ಬಂದ ಆಫರ್ ತಿರಸ್ಕರಿಸುವ ಮೂಲಕ ದೀಪಿಕಾ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಅಂದ ಹಾಗೆ ದೀಪಿಕಾ ಈ ಆಫರ್ ತಿರಸ್ಕರಿಸಲೂ ಒಂದು ಕಾರಣವಿದೆ. ಬಾಲಿವುಡ್ ಚಿತ್ರರಂಗದಲ್ಲಿ ಈಗ ತನ್ನದೇ ಆದ ಸ್ಥಾನ ಹೊಂದಿರುವ ದೀಪಿಕಾ ಪಾತ್ರಗಳ ಆಯ್ಕೆಯಲ್ಲೂ ಚೂಸಿಯಾಗಿದ್ದಾರೆ. ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ನಟಿಸುವ ತೀರ್ಮಾನ ಕೈಗೊಂಡಿರುವ ದೀಪಿಕಾ, ಈ ಕಾರಣಕ್ಕಾಗಿಯೇ ರಣವೀರ್ ಸಿಂಗ್ ಮುಂಬರುವ ಚಿತ್ರ ’83’ ರಲ್ಲಿ ನಟಿಸಲು ನಿರಾಕರಿಸಿದ್ದಾರೆಂದು ಹೇಳಲಾಗಿದೆ.

’83’ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಕಪಿಲ್ ದೇವ್ ಜೀವನಾಧಾರಿತ ಚಿತ್ರವೆಂದು ಹೇಳಲಾಗಿದ್ದು,1983 ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವ ಕಪ್ ವಿಜೇತವಾಗಿದ್ದರ ಕಥೆ ಇರುವ ಕಾರಣಕ್ಕೆ ಇದಕ್ಕೆ 83 ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ದೀಪಿಕಾಗೆ ಚಿತ್ರ ತಂಡ ಆಫರ್ ನೀಡಿದ್ದು, ಈ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲವೆಂಬ ಕಾರಣಕ್ಕೆ ದೀಪಿಕಾ ನಯವಾಗಿ ನಿರಾಕರಿಸಿದ್ದಾರೆಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...