alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಮಾಪಕರನ್ನು ಸೆಳೆಯಲು ದೀಪಿಕಾಗೆ ಇಂಥ ಸಲಹೆ ನೀಡಿದ್ರಂತೆ ಜನರು

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೌಂದರ್ಯ ಹಾಗೂ ನಟನೆಯಿಂದ ಸಾಕಷ್ಟು ಹೆಸರು ಮಾಡಿದ್ದಾರೆ. ದೀಪಿಕಾ ಕಲಾವಿದರ ಕುಟುಂಬದಿಂದ ಬಂದವರಲ್ಲ. ಹಾಗಾಗಿ ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸೋದು ಸುಲಭವಾಗಿರಲಿಲ್ಲ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ ಕೆಲ ಕಹಿ-ಸಿಹಿ ಘಟನೆಗಳನ್ನು ಮೆಲುಕು ಹಾಕಿದ್ರು.

ವೃತ್ತಿಯ ಆರಂಭದಲ್ಲಿ ದೀಪಿಕಾಗೆ ಅನೇಕರು ಸಲಹೆ ನೀಡಿದ್ದಂತೆ. ದೇಹದ ಬೇರೆ ಬೇರೆ ಭಾಗಗಳ ಸರ್ಜರಿಗೆ ಸಲಹೆ ನೀಡಲಾಗಿತ್ತಂತೆ. ಕೆಲವರು ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಸಂದರ್ಶನದಲ್ಲಿ ಆಘಾತಕಾರಿ ವಿಷ್ಯಗಳನ್ನು ದೀಪಿಕಾ ಹೇಳಿದ್ದಾರೆ.

ಆರಂಭದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತಂತೆ. ಸ್ತನ ಸರ್ಜರಿ ಮಾಡಿಸಿಕೊಂಡ್ರೆ ನಿರ್ಮಾಪಕರು, ನಿರ್ದೇಶಕರನ್ನು ಸೆಳೆಯಬಹುದೆಂದು ಕೆಲವರು ಸಲಹೆ ನೀಡಿದ್ರಂತೆ. ಅರ್ಧ ಜೀವನವನ್ನು ಕ್ರೀಡಾಪಟುವಾಗಿಯೇ ಕಳೆದಿದ್ದ ನಾನು ಮಾಡೆಲ್ ಅಥವಾ ನಟಿಯಾಗ್ತೇನೆ ಎಂದು ಯಾರೂ ಊಹಿಸಿರಲಿಲ್ಲ ಎನ್ನುತ್ತಾರೆ ದೀಪಿಕಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...