alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿ-ರಣವೀರ್ ಮದುವೆಗೆ ಟೈಟ್ ಸೆಕ್ಯೂರಿಟಿ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಗೆ ತಯಾರಿ ಜೋರಾಗಿ ನಡೆದಿದೆ. ಇಟಲಿಯ ಲೇಕ್ ಕೋಮಾದ Villa del Balbianello ದಲ್ಲಿ ಮದುವೆ ನಡೆಯಲಿದೆ. ಮದುವೆಗೆ ಬಿಗಿ ಭದ್ರತೆ ಒದಗಿಸಲಾಗಿದೆಯಂತೆ. ವರದಿ ಪ್ರಕಾರ, ಮದುವೆಗೆ ಉನ್ನತ ಮಟ್ಟದ ಭದ್ರತೆ ಒದಗಿಸಲಾಗಿದೆಯಂತೆ.

ದೀಪಿಕಾ-ರಣವೀರ್ ಮದುವೆಗೆ ಕೇವಲ 30 ಮಂದಿ ಪಾಲ್ಗೊಳ್ಳಲಿದ್ದಾರೆ. ದೀಪಿಕಾ ಒಂದು ವಾರಗಳ ಕಾಲ ಸ್ಥಳವನ್ನು ಬುಕ್ ಮಾಡಿದ್ದು, ಅಲ್ಲಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಐಷಾರಾಮಿ ಮದುವೆಗೆ ರಣವೀರ್-ದೀಪಿಕಾ ಕೈಬಿಚ್ಚಿ ಖರ್ಚು ಮಾಡ್ತಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಮದುವೆ ಸಮಾರಂಭದಲ್ಲಿ ಜೋಡಿ ಎರಡು ಬಾರಿ ಮದುವೆಯಾಗಲಿದ್ದಾರೆ. ಕೊಂಕಣಿ ಪದ್ಧತಿಯಲ್ಲಿ ಹಾಗೂ ಸಿಂಧಿ ಪದ್ಧತಿಯಲ್ಲಿ ಮದುವೆ ನೆರವೇರಲಿದೆ. ಮದುವೆ ನಡೆಯುತ್ತಿರುವ Villa del Balbianelloದ ಒಂದು ದಿನದ ಬಾಡಿಗೆ 8 ರಿಂದ 10 ಸಾವಿರ ಯುರೋ ಎನ್ನಲಾಗಿದೆ. ರೂಪಾಯಿಯಲ್ಲಿ ನೋಡಿದ್ರೆ ರಣವೀರ್-ದೀಪಿ ಒಂದು ದಿನಕ್ಕೆ 8,20,000 ರೂಪಾಯಿ ಬಾಡಿಗೆ ನೀಡಬೇಕು.

ಇಷ್ಟೆ ಅಲ್ಲ ದೀಪಿಕಾ ಮಂಗಳಸೂತ್ರದ ಬೆಲೆಯೇ 10 ಲಕ್ಷ ರೂಪಾಯಿ. ಇನ್ನು ಉಡುಗೆ-ತೊಡುಗೆ, ಆಹಾರ ಸೇರಿದಂತೆ ಕೈತುಂಬಾ ಖರ್ಚು ಬರಲಿದ್ದು, ಐಷಾರಾಮಿ ಮದುವೆಗೆ ದೀಪಿ-ರಣವೀರ್ ಸಿದ್ಧರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...