alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿ-ರಣವೀರ್ ಸಂಬಂಧಿಕರಿಗೆ ವಿಧಿಸಿದ ಷರತ್ತೇನು ಗೊತ್ತಾ…?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ನವೆಂಬರ್ 14-15 ರಂದು ಸ್ಟಾರ್ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ಇಟಲಿಯಲ್ಲಿ ಮದುವೆ ನಡೆಯಲಿದ್ದು, ಮದುವೆಗೆ 30 ಜನ ಮಾತ್ರ ಹೋಗ್ತಿದ್ದಾರೆ.

ಮದುವೆ ನಂತ್ರ ಮುಂಬೈ ಹಾಗೂ ಬೆಂಗಳೂರಿನಲ್ಲಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿದೆ. ರಿಸೆಪ್ಷನ್ ಪಾರ್ಟಿ ಕಾರ್ಡ್ ಕೂಡ ಸಂಬಂಧಿಕರು, ಸ್ನೇಹಿತರನ್ನು ತಲುಪಿದೆ. ಈ ಕಾರ್ಡ್ ನಲ್ಲಿ ಜೋಡಿ ವಿನಂತಿಯೊಂದನ್ನು ಮಾಡಿದ್ದಾರೆ. ಉಡುಗೊರೆ ನೀಡಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಉಡುಗೊರೆ ನೀಡುವ ಆಸಕ್ತಿಯಿದ್ದವರು ದಿ ಲಿವ್ ಲವ್ ಲಾಫ್ ಫೌಂಡೇಶನ್ ಗೆ ಉಡುಗೊರೆ ನೀಡಿ ಎಂದಿದ್ದಾರೆ.

ದಿ ಲಿವ್ ಲವ್ ಲಾಫ್ ಫೌಂಡೇಶನ್ ದೀಪಿಕಾ ಪಡುಕೋಣೆ ನಡೆಸುತ್ತಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿ ಮೂಡಿಸುವ ಕೆಲಸವನ್ನು ಈ ಫೌಂಡೇಶನ್ ಮಾಡ್ತಿದೆ. ಮುಂಬೈನಲ್ಲಿ ನವೆಂಬರ್ 28 ರಂದು ರಿಸೆಪ್ಷನ್ ಪಾರ್ಟಿ ನಡೆಯಲಿದೆ. ಗ್ರ್ಯಾಂಡ್ ಹಯಾತ್ ಹೊಟೇಲ್ ನಲ್ಲಿ ಪಾರ್ಟಿ ನೀಡಲು ನಿರ್ಧರಿಸಲಾಗಿದೆ. ರಿಸೆಪ್ಷನ್ ಪಾರ್ಟಿ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...