alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಸುದ್ದಿಯಲ್ಲಿದ್ದಾರೆ ದೀಪಿ-ರಣವೀರ್

ranveer-singh-deepika-padukone_650x400_51503199350

ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಸಂಬಂಧದ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಆದ್ರೆ ಆಗಾಗ ಒಟ್ಟಿಗೆ ಕಾಣಿಸಿಕೊಂಡು ಸುದ್ದಿ ಮಾಡುತ್ತಿರುತ್ತಾರೆ. ಶನಿವಾರ ರಾತ್ರಿ ಬಾಜಿರಾವ್ ಮಸ್ತಾನಿ ಚಿತ್ರದ ಸೂಪರ್ ಹಿಟ್ ಜೋಡಿ ನಿರ್ಮಾಪಕ ರಿತೇಶ್ ಬರ್ತ್ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದೇ ಕಾರಿನಲ್ಲಿ ಪಾರ್ಟಿಗೆ ಬಂದ ಜೋಡಿ ಪಾರ್ಟಿ ಮುಗಿಸಿ ಒಟ್ಟಿಗೆ ವಾಪಸ್ ಹೋಗಿದ್ದಾರೆ. ಸದ್ಯ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪದ್ಮಾವತಿ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇಬ್ಬರ ನಡುವೆ ಕೆಲ ದಿನ ಕುಚ್ ಕುಚ್ ನಡೆಯುತ್ತಿತ್ತು. ಆದ್ರೆ ಈಗ ಇಬ್ಬರೂ ಬೇರೆಯಾಗಿದ್ದಾರೆ ಎಂಬ ಮಾತೂ ಕೇಳಿ ಬಂದಿದೆ. ಯಾವುದೇ ಜಗಳ ಮಾಡಿಕೊಳ್ಳದೆ ಇಬ್ಬರು ಸಂಬಂಧದಿಂದ ಹೊರ ಬಂದಿದ್ದಾರೆ ಎಂದು ಮೂಲಗಳು ಹೇಳ್ತಿವೆ.

ಶನಿವಾರ ರಿತೇಶ್ ಪಾರ್ಟಿ ಭರ್ಜರಿಯಾಗಿ ನಡೀತು. ದೀಪಿ-ರಣವೀರ್ ಜೊತೆ ಪ್ರಿಯಾಂಕ ಚೋಪ್ರಾ ಕೂಡ ಪಾರ್ಟಿಗೆ ಬಂದಿದ್ದಳು. ಮಲೈಕಾ ಅರೋರಾ ಖಾನ್, ಅಮೃತಾ ಅರೋರಾ, ಅರ್ಬಾಜ್ ಖಾನ್ ಸೇರಿದಂತೆ ಅನೇಕರು ಪಾರ್ಟಿಗೆ ಬಂದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...