alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತಿ ಬಿಡುಗಡೆ ತಡೆಯಲು ಸಾಧ್ಯವಿಲ್ಲ – ದೀಪಿಕಾ

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗ್ತಿದೆ. ರಾಜಕಾರಣಿಗಳಿಂದ ಹಿಡಿದು ಶ್ರೀಸಾಮಾನ್ಯರವರೆಗೆ ಅನೇಕರು ಪದ್ಮಾವತಿಗೆ ವಿರೋಧ ವ್ಯಕ್ತಪಡಿಸ್ತಿದ್ದಾರೆ. ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ನಟಿ ದೀಪಿಕಾ ಪಡುಕೋಣೆ ಕೋಪಕ್ಕೆ ಕಾರಣವಾಗಿದೆ.

ಚಿತ್ರದ ಬಗ್ಗೆ ಇದೇ ಮೊದಲ ಬಾರಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ಬಿಡುಗಡೆಯಾಗೋದು ಬಹಳ ಮುಖ್ಯ. ಬಿಡುಗಡೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ದೀಪಿ ಹೇಳಿದ್ದಾರೆ. ಪದ್ಮಾವತಿಗೆ ವಿರೋಧ ವ್ಯಕ್ತವಾಗ್ತಿದ್ದಂತೆ ಚಿತ್ರರಂಗ ಒಗ್ಗೂಡಿದೆ. ಸೋಮವಾರ ನಾಲ್ಕು ಸಂಘಟನೆಗಳು ಸಭೆ ನಡೆಸಿ ಸಂಜಯ್ ಲೀಲಾ ಬನ್ಸಾಲಿಗೆ ಬೆಂಬಲ ನೀಡಿವೆ. ಪದ್ಮಾವತಿ ಬಿಡುಗಡೆ ವೇಳೆ ಸರ್ಕಾರ ಭದ್ರತೆ ನೀಡಬೇಕೆಂದು ಮನವಿ ಮಾಡಿವೆ. ನವೆಂಬರ್ 16ರಂದು 15 ನಿಮಿಷಗಳ ಕಾಲ ಚಿತ್ರರಂಗ ಪ್ರತಿಭಟನೆ ನಡೆಸಲಿದೆ.

ಪದ್ಮಾವತಿ ಪಾತ್ರದಲ್ಲಿ ನಟಿಸಲು ನನಗೆ ಹೆಮ್ಮೆಯಾಗುತ್ತದೆ. ದೇಶದ ಜನರು ತಿಳಿದುಕೊಳ್ಳುವಂತಹ ಕಥೆಯಿದು. ಸೆನ್ಸಾರ್ ಬೋರ್ಡ್ ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಲಿದೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ ಎಂದು ದೀಪಿಕಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...