alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್ ಕುರಿತು ‘ಶಾಕಿಂಗ್’ ಸತ್ಯ ಬಿಚ್ಚಿಟ್ಟ ದೀಪಿಕಾ

ಬಾಲಿವುಡ್ ಹಾಟ್ ಜೋಡಿಗಳಲ್ಲಿ ಒಂದಾಗಿದ್ದ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ದೂರವಾಗಿ ಅನೇಕ ವರ್ಷ ಕಳೆದಿದೆ. ರಣಬೀರ್-ದೀಪಿಕಾ ಬ್ರೇಕ್ ಅಪ್ ಗೆ ಕಾರಣವೇನು ಎಂಬುದನ್ನು ದೀಪಿಕಾ ಈಗ ಬಾಯ್ಬಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ ರಣಬೀರ್ ಹೆಸರು ಹೇಳದೆ ಬ್ರೇಕ್ ಅಪ್ ನೋವನ್ನು ತೋಡಿಕೊಂಡಿದ್ದಾರೆ.

ನಾನು ಅವ್ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ. ಆಗ್ಲೇ ಎಲ್ಲ ಭಾವನೆಗಳನ್ನು ಮರೆತು ದೂರವಾಗುವ ನಿರ್ಧಾರ ತೆಗೆದುಕೊಂಡೆ ಎಂದು ದೀಪಿಕಾ ಹೇಳಿದ್ದಾರೆ. ಹತ್ತಿರವಾಗುವುದೆಂದ್ರೆ ದೈಹಿಕವಾಗಿ ಮಾತ್ರವಲ್ಲ. ನನ್ನ ಪ್ರಕಾರ ಭಾವನೆಗಳು ಒಂದಾಗಬೇಕು. ಹೀಗಂತ ನಾನು ಯೋಚನೆ ಮಾಡ್ತೇನೆ. ಬೇರೆಯವರು ನನ್ನಂತೆ ಆಲೋಚಿಸಬೇಕೆಂದೇನು ಇಲ್ಲ ಎಂದಿದ್ದಾರೆ ದೀಪಿಕಾ.

ಸಂಬಂಧದಲ್ಲಿರುವ ವೇಳೆ ನನಗೆ ಅನೇಕರು ಹೇಳಿದ್ದರು, ಆತ ಮೋಸ ಮಾಡ್ತಿದ್ದಾನೆಂದು. ನನಗೂ ಇದ್ರ ಬಗ್ಗೆ ಗೊತ್ತಿತ್ತು. ವ್ಯಕ್ತಿ ನನ್ನ ಮುಂದೆ ಬೇಡಿಕೊಂಡಿದ್ದರಿಂದ ಇನ್ನೊಂದು ಅವಕಾಶ ನೀಡಿದ್ದೆ. ಆದ್ರೆ ಕಣ್ಣ ಮುಂದೆಯೇ ಮತ್ತೊಮ್ಮೆ ಸತ್ಯ ಬಯಲಾಯ್ತು. ಬ್ರೇಕ್ ಅಪ್ ನಂತ್ರ ತುಂಬಾ ಅತ್ತಿದ್ದೇನೆ. ಸಮಯ ಕಳೆದಂತೆ ನಾನು ಬದಲಾದೆ. ಸಂಬಂಧದಲ್ಲಿರುವಾಗ ಸಂಗಾತಿಗೆ ಮೋಸ ಮಾಡುವುದು ಸರಿಯಲ್ಲ. ನಾನು ಎಂದೂ ಈ ರೀತಿ ನಡೆದುಕೊಂಡಿಲ್ಲವೆಂದು ದೀಪಿಕಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...