alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಮನೆ ಖರೀದಿ ಮಾಡಿದ್ದಾಳೆ ರಣವೀರ್ ಬೆಡಗಿ

ಪದ್ಮಾವತ್ ಚಿತ್ರ ಬಿಡುಗಡೆಗೆ ಕಾಯುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಲಂಡನ್ ನಲ್ಲೊಂದು ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾಳೆ. ಹೊಸ ಮನೆಯಲ್ಲಿ ದೀಪಿಕಾ ಕೆಲ ಸಮಯ ಕಳೆಯಲು ಆಸೆ ಪಟ್ಟಿದ್ದಾಳಂತೆ.

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತ್ ಬಿಡುಗಡೆಯಾಗಿ ಯಶಸ್ಸು ಕಂಡ್ರೆ ದೀಪಿ ಲಂಡನ್ ಗೆ ಹಾರಲಿದ್ದಾಳಂತೆ. ಹೊಸ ಮನೆಯಲ್ಲಿ ಕೆಲ ಸಮಯ ಕಳೆಯುವ ಯೋಜನೆ ದೀಪಿಕಾಗಿದೆ ಎಂದು ಮೂಲಗಳು ಹೇಳಿವೆ.

ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಗೋವಾದಲ್ಲಿ ಒಂದಾಗಿ ಆಸ್ತಿ ಖರೀದಿ ಮಾಡಿದ್ದಾರೆಂಬ ಸುದ್ದಿಯಿತ್ತು. ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮದುವೆ ನಂತ್ರ ದೀಪಿ ಹಾಗೂ ರಣವೀರ್ ಸುದ್ದಿಯಲ್ಲಿದ್ದಾರೆ.

ಹೊಸ ವರ್ಷದ ನಂತ್ರ ಶ್ರೀಲಂಕಾದಲ್ಲಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದ್ರೆ ಎಂಗೇಜ್ ಆಗಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯಿಲ್ಲ. ಸದ್ಯ ದೀಪಿಕಾ ಪದ್ಮಾವತ್ ಬಿಡುಗಡೆಗೆ ಕಾಯ್ತಿದ್ದಾಳೆ. ಜನವರಿ 25ರಂದು ಚಿತ್ರ ಬಿಡುಗಡೆಗೆ ಮತ್ತೊಂದು ಮುಹೂರ್ತವಿಡಲಾಗಿದೆ. ಆದ್ರೆ ಈ ಮುಹೂರ್ತದಲ್ಲೂ ಚಿತ್ರ ಬಿಡುಗಡೆಯಾಗೋದು ಅನುಮಾನ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...