alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಾಗಿ ಶಾಪಿಂಗ್ ಶುರು ಮಾಡಿದ್ದಾಳೆ ದೀಪಿಕಾ

ಕುತ್ತಿಗೆಗೆ ಗಾಯ ಮಾಡಿಕೊಂಡಿರೋ ನಟಿ ದೀಪಿಕಾ ಪಡುಕೋಣೆ ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರ ಜೊತೆಜೊತೆಗೆ ಫ್ರೀ ಟೈಂನಲ್ಲಿ ಮದುವೆ ಶಾಪಿಂಗ್ ಕೂಡ ಶುರುಮಾಡಿದ್ದಾರಂತೆ. ತಾಯಿ ಹಾಗೂ ಸಹೋದರಿ ಜೊತೆಗೆ ಮದುವೆಗಾಗಿ ದೀಪಿಕಾ ಬಟ್ಟೆ ಬರೆ ಖರೀದಿಸ್ತಿದ್ದಾರೆ.

ಹಲವು ಜ್ಯುವೆಲರಿ ಮಳಿಗೆಗಳಿಗೆ ಸಹ ದೀಪಿ ಭೇಟಿಕೊಟ್ಟಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ದೀಪಿಕಾ ಹಾಗೂ ರಣವೀರ್ ಸಿಂಗ್ ಮದುವೆ ದಿನಾಂಕ ನಿಗದಿಯಾಗಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ದೀಪಿಕಾ ಹುಟ್ಟುಹಬ್ಬದ ದಿನ ಅಂದ್ರೆ ಜನವರಿ 5ರಂದು ನಿಶ್ಚಿತಾರ್ಥ ನೆರವೇರಿದೆಯಂತೆ.

ಬೆಂಗಳೂರಿನಿಂದ ಮುಂಬೈಗೆ ಬಂದಿದ್ದ ದೀಪಿಕಾ ಹೆತ್ತವರು, ರಣವೀರ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು. ಎರಡೂ ಕುಟುಂಬಗಳು ಜೊತೆಯಾಗಿ ಭೋಜನ ಕೂಟದಲ್ಲಿ ಪಾಲ್ಗೊಂಡಿವೆ. ಈ ಸಂದರ್ಭದಲ್ಲಿ ಮದುವೆ ಮಾತುಕತೆ ಸಹ ನಡೆದಿದೆ ಎನ್ನಲಾಗ್ತಿದೆ.

ಕೊಹ್ಲಿ-ಅನುಷ್ಕಾರಂತೆ ದೀಪಿಕಾ-ರಣವೀರ್ ಕೂಡ ಡೆಸ್ಟಿನೇಶನ್ ವೆಡ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿಯಿತ್ತು. ಆದ್ರೆ ಮದುವೆ ಮುಂಬೈನಲ್ಲೇ ನಡೆಯಲಿ ಅನ್ನೋದು ರಣವೀರ್ ಹೆತ್ತವರ ಆಸೆ. ದಕ್ಷಿಣ ಭಾರತೀಯ ಸಂಪ್ರದಾಯದಂತೆ ಮದುವೆ ನೆರವೇರಲಿದೆ.

ನಂತರ ಬೆಂಗಳೂರಿನಲ್ಲೂ ದೀಪಿಕಾ ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಗಾಗಿ ಅದ್ಧೂರಿ ರಿಸೆಪ್ಷನ್ ಏರ್ಪಡಿಸಲಿದ್ದಾರೆ. ಆದ್ರೆ ದೀಪಿಕಾ ಹಾಗೂ ರಣವೀರ್ ಇದುವರೆಗೂ ಮದುವೆ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...