alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಅದ್ದೂರಿ ಮದುವೆಯ ಫೋಟೋಗಳು ಬಹಿರಂಗ

ಬಾಲಿವುಡ್ ನ ಹೈಪ್ರೊಫೈಲ್ ಮದುವೆಯಾಗಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಫೋಟೋಗಾಗಿ ಕಾಯುತ್ತಿದ್ದ ಇಡೀ ಬಾಲಿವುಡ್ ಅಭಿಮಾನಿಗಳಿಗೆ ಭಾರಿ‌ ನಿರಾಸೆ‌ ಮೂಡಿಸಿತ್ತು.

ಹೌದು, ಈ ಜೋಡಿ ಇಟಲಿಯಲ್ಲಿ ವಿವಾಹ ಬಂಧನದಲ್ಲಿ ಒಂದಾಗಿದ್ದು, ಈ ಮಹತ್ತರ ಕ್ಷಣಗಳನ್ನು ನೋಡಲು ಆತ್ಮೀಯರಿಗೆ ಮಾತ್ರ ಆಹ್ವಾನಿಸಿದ್ದರು. ಆದ್ದರಿಂದ ಅನೇಕರು, ಜೋಡಿ ಫೋಟೋ ನೋಡಿ ತೃಪ್ತಿ ಪಡಲು ನಿಶ್ಚಯಿಸಿದ್ದರು. ಆದರೆ ಇದೀಗ ಮದುವೆಗೆ ಆಗಮಿಸಿದ ಪ್ರತಿಯೊಬ್ಬರಿಗೂ ಫೋಟೋಗಳನ್ನು ಕ್ಲಿಕ್ಕಿಸಬೇಡಿ ಎಂದು ಮನವಿ ಮಾಡುವ ಮೂಲಕ, ಈ ಆಸೆಗೂ ತಣ್ಣೀರು ಎರಚಿದ್ದರು.

ಆದರೆ ಆಗಮಿಸಿದ ಅತಿಥಿಗಳೊಂದಿಗೆ ತೆಗೆಸಿಕೊಂಡ ಹಾಗೂ ಮದುವೆ ಫೋಟೋಗಳನ್ನು ತಾವೇ ಖುದ್ದಾಗಿ ಶೇರ್ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದ್ದರಿಂದ ಮದುವೆಯಾದ ಕೆಲ ದಿನಗಳವರೆಗೆ ಜೋಡಿ ಹಕ್ಕಿಯ ವಿವಾಹದ ಕ್ಷಣ ನೋಡಲು ಕಾಯಬೇಕಿದೆ. ಇದರ ಮಧ್ಯೆಯೂ ದೂರದಿಂದ ಕೆಲವರು ಮದುವೆ ಫೋಟೋ ಕ್ಲಿಕ್ಕಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...