alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನವೇ ಈ ಜೋಡಿ ಖರೀದಿಸಲಿರುವ ಮನೆ ಬೆಲೆ ಕೇಳಿದ್ರೇ ಸುಸ್ತೋ ಸುಸ್ತು…!

ಇಡೀ ಬಾಲಿವುಡ್ ಕಾತರದಿಂದ ಕಾಯುತ್ತಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಕೆಲವೇ ದಿನದಲ್ಲಿ ನಡೆಯುತ್ತಿದೆ ಎನ್ನುವುದು‌ ಒಂದೆಡೆಯಾದರೆ, ಮದುವೆ ಬಳಿಕ ತಮ್ಮ ನವ ಜೀವನಕ್ಕೆ ಹೊಸ ಮನೆ ಹುಡುಕುತ್ತಿದೆ ಈ ಜೋಡಿ ಎನ್ನುವುದು ಇದೀಗ‌ ಬಾಲಿವುಡ್ ನಲ್ಲಿ ನಡೆಯುತ್ತಿರುವ ಹೊಸ ಚರ್ಚೆ.

ಹೌದು, ನ.14-15 ರಂದು ಇಟಲಿಯಲ್ಲಿ ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಲಿರುವ ಈ ಜೋಡಿ, ಮುಂಬೈನ ಪ್ರಮುಖ ಭಾಗದಲ್ಲಿ ಮನೆ ಹುಡುಕುತ್ತಿದ್ದಾರಂತೆ. ಅದರಲ್ಲಿಯೂ ಬಾಲಿವುಡ್ ನ ಭಾರಿ ಬೇಡಿಕೆಯ ನಟ ಶಾರುಕ್ ಖಾನ್ ಅವರ ಬಂಗಲೆಯ ರಸ್ತೆಯಲ್ಲಿಯೇ ಮನೆ ಹುಡುಕುತ್ತಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು.

ಮದುವೆಯಾದ ಬಳಿಕ ಕೆಲ ದಿನದ ಮಟ್ಟಿಗೆ ದೀಪಿಕಾ ಅವರ ಪ್ರಭಾದೇವಿ ಫ್ಲಾಟ್ ನಲ್ಲಿಯೇ ವಾಸವಿರಲಿದ್ದಾರೆ. ಕೆಲ‌ ದಿನದ ಬಳಿಕ ತಮ್ಮ ಕನಸಿನ ಮನೆಯನ್ನು ಹುಡುಕಿ, ಅಲ್ಲಿಗೆ ಹೋಗುವ ಪ್ಲಾನ್ ಮಾಡಿದೆ ಎಂದು ತಿಳಿದು ಬಂದಿದೆ.

ಶಾರುಕ್ ಖಾನ್ ಬಂಗಲೆಯಿರುವ ‘ಮನ್ನತ್’ ಪ್ರದೇಶದಲ್ಲಿಯೇ ಈ ಜೋಡಿ ಸ್ವಂತ ಮನೆ ಹುಡುಕುತ್ತಿದೆ ಎನ್ನಲಾಗಿದ್ದು, ಇದಕ್ಕೆ ಸುಮಾರು 70 ಕೋಟಿ ಹೂಡಿಕೆ ಮಾಡಬೇಕಿದೆ ಎಂದು ಅಂದಾಜಿಸಿದ್ದು, ಅದಕ್ಕಾಗಿ ಯೋಚಿಸಿ, ತಮಗಿಷ್ಟದ ಮನೆಗೆ ಹೋಗಲು‌ ನಿರ್ಧರಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...