alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ದಿಲ್ಲದೆ ಮದುವೆ ತಯಾರಿ ನಡೆಸಿದೆ ಈ ಜೋಡಿ

ಬಾಲಿವುಡ್ ಬೆಡಗಿ ಸೋನಂ ಕಪೂರ್ ಮದುವೆ ಸುದ್ದಿಯಲ್ಲಿರುವಾಗ್ಲೇ ಬಾಲಿವುಡ್ ನ ಇನ್ನೊಂದು ಜೋಡಿ ಸದ್ದಿಲ್ಲದೆ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೀಪಿಕಾ ಮೂಲಗಳ ಪ್ರಕಾರ ನವೆಂಬರ್ ನಲ್ಲಿ ಮದುವೆ ಸಮಾರಂಭ ನಡೆಯಲಿದೆಯಂತೆ.

ನವೆಂಬರ್ ನಲ್ಲಿ ಮದುವೆ ನಡೆಯುವುದ್ರಿಂದ ದೀಪಿಕಾ ತನ್ನ ತಂಡದ ಯಾವುದೇ ಸದಸ್ಯರಿಗೆ ರಜಾ ನೀಡ್ತಿಲ್ಲ ಎನ್ನಲಾಗಿದೆ. ದೀಪಿ ಹಾಗೂ ರಣವೀರ್ ಮನೆಯಲ್ಲಿ ತಯಾರಿ ಜೋರಾಗಿ ನಡೆದಿದೆ. ಮದುವೆ ತುಂಬಾ ಸರಳವಾಗಿ ನಡೆಯಲಿದೆ. ದೇಶದಲ್ಲಿ ನಡೆಯಲಿದ್ಯಾ ಇಲ್ಲ ವಿದೇಶದಲ್ಲಿ ಮದುವೆ ನಡೆಯಲಿದ್ಯಾ ಎನ್ನುವ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಪಾರ್ಟಿ ಮಾತ್ರ ಎರಡು ಕಡೆ ನಡೆಯಲಿದೆ. ಮುಂಬೈ ಹಾಗೂ ಬೆಂಗಳೂರಿನಲ್ಲಿ ರಿಸೆಪ್ಶನ್ ಗೆ ತಯಾರಿ ನಡೆಸಲಾಗ್ತಿದೆ.

ದೀಪಿಕಾ ಹಾಗೂ ರಣವೀರ್ ಕುಟುಂಬದ ಸದಸ್ಯರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದ್ರೆ ಸದ್ದಿಲ್ಲದೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಉಡುಗೊರೆ ವಿನಿಮಯ ಕಾರ್ಯಕ್ರಮ ಕೂಡ ಶುರುವಾಗಿದೆ. ಮದುವೆಗೆ ಆಪ್ತರು ಮಾತ್ರ ಬರಲಿದ್ದಾರಂತೆ. ಕೆಲ ದಿನಗಳ ಹಿಂದಷ್ಟೇ ದೀಪಿಕಾ ಬಂಗಾರದ ಅಂಗಡಿಯಲ್ಲಿ ಕಾಣಿಸಿಕೊಂಡಿದ್ದಳು.

ಇಷ್ಟೇ ಅಲ್ಲ ದೀಪಿಕಾ ಹಾಗೂ ರಣವೀರ್ ಮನೆ ಖರೀದಿಗೆ ಮುಂದಾಗಿದ್ದಾರೆ. ಓಂಕಾರ್ 1973 ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದ್ದರು. ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಇದೇ ಅಪಾರ್ಟ್ಮಮೆಂಟ್ ನಲ್ಲಿದ್ದಾರೆ. ಈ ಅಪಾರ್ಟ್ಮೆಂಟ್ ದೀಪಿಗೆ ಇಷ್ಟವಾಗಿದ್ದು, ಮನೆ ಖರೀದಿಗೆ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...