alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಂಕಣಿ ಸಂಪ್ರದಾಯದಂತೆ ಮದುವೆಯಾಗಿದೆ ಈ ಬಾಲಿವುಡ್ ಜೋಡಿ

ಬಾಲಿವುಡ್ ನ ಬಹುಚರ್ಚಿತ ಜೋಡಿಯಾದ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ
ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಬುಧವಾರ ಕೊಂಕಣಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅದ್ದೂರಿಯಾಗಿ ಹಾಗೂ ಸಂಪ್ರದಾಯಬದ್ಧವಾಗಿ ನಡೆದ ಈ ವಿವಾಹ ಸಮಾರಂಭದಲ್ಲಿ ಈ ಜೋಡಿಯ ಕುಟುಂಬ ಸದಸ್ಯರು ಹಾಗೂ ಆತ್ಮೀಯರಷ್ಟೇ ಉಪಸ್ಥಿತರಿದ್ದರು

ಮದುವೆ ಕಾರ್ಯಕ್ರಮದ ನಂತರ ಈ ನೂತನ ದಂಪತಿ ಆಹ್ವಾನಿತ 30 ಮಂದಿಗೆ ಭರ್ಜರಿ ಪಾರ್ಟಿಯೊಂದನ್ನೂ ನೀಡಿದ್ದಾರೆ.

ವಿಶೇಷವೆಂದರೆ ಈ ಜೋಡಿ ಗುರುವಾರ ರಣವೀರ್ ಅವರ ಕುಟುಂಬದ ಸಂಪ್ರದಾಯದಂತೆ ಸಿಂಧಿ ಶೈಲಿಯಲ್ಲಿ ಮತ್ತೆ ಮದುವೆಯಾಗಲಿದೆ. ಮದುವೆ ನಂತರ ದೀಪಿಕಾ -ರಣವೀರ್ ಹನಿಮೂನ್ ಗೆ ಹಾರಲಿದ್ದು, ಆ ಬಳಿಕ ಬೆಂಗಳೂರು ಹಾಗೂ ಮುಂಬೈನಲ್ಲಿ ನ.21 ಮತ್ತು28ರಂದು ಸಿನಿಮಾ ಮಂದಿಗಾಗಿ ವಿಶೇಷ ಔತಣ ಕೂಟವನ್ನೂ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...