alex Certify
ಕನ್ನಡ ದುನಿಯಾ       Mobile App
       

Kannada Duniya

ನ.19 ರಂದು ದಾಂಪತ್ಯಕ್ಕೆ ಕಾಲಿಡಲಿದೆ ಈ ಜೋಡಿ

ಬಾಲಿವುಡ್ ಮತ್ತೊಂದು ಮದುವೆಗೆ ಸಜ್ಜಾಗ್ತಿದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮದುವೆ ದಿನಾಂಕ ಬಹುತೇಕ ಅಂತಿಮವಾಗಿದೆ. ಮೂಲಗಳ ಪ್ರಕಾರ ದೀಪಿ-ರಣವೀರ್ ಮದುವೆ ನವೆಂಬರ್ 19ರಂದು ಮುಂಬೈನಲ್ಲಿ ನಡೆಯಲಿದೆ.

ದೀಪಿಕಾ ಕುಟುಂಬಸ್ಥರು ಈ ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ. ರಣವೀರ್-ದೀಪಿಕಾ ಜಾತಕ ನೋಡಿ ಜ್ಯೋತಿಷ್ಯರ ಸಲಹೆ ಮೇರೆಗೆ ಮುಹೂರ್ತ ನಿಗದಿಪಡಿಸಿದ್ದಾರೆ ಎನ್ನಲಾಗಿದೆ. ರಣವೀರ್ ಸಿಂಗ್ ಕುಟುಂಬಸ್ಥರಿಗೂ ದಿನಾಂಕದ ಬಗ್ಗೆ ಹೇಳಲಾಗಿದ್ದು, ಎಲ್ಲರ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.

ದೀಪಿ-ರಣವೀರ್ ಮದುವೆ ದಕ್ಷಿಣ ಭಾರತೀಯ ಶೈಲಿಯಲ್ಲಿ ನಡೆಯಲಿದೆ. ರಣವೀರ್ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಲಿದ್ದಾರೆ. ದೀಪಿಕಾ ಬಟ್ಟೆಯನ್ನು ಖ್ಯಾತ ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಮದುವೆ ಮುಂಬೈನಲ್ಲಿ ನಡೆಯಲಿದ್ದು, ಆಗಸ್ಟ್ ವೇಳೆಗೆ ಸ್ಥಳ ಅಂತಿಮವಾಗಲಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...