alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ಮದುವೆಯಾಗ್ತಿಲ್ಲ ದೀಪಿ-ರಣವೀರ್

ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಿನಿಮಾಗಿಂತ ಮದುವೆ ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗ್ತಾರೆ ಎಂಬ ಸುದ್ದಿಯಿತ್ತು. ಮದುವೆ ದಿನಾಂಕ ಫಿಕ್ಸ್ ಆಗಿದೆ. ಇಬ್ಬರ ಮನೆಯಲ್ಲೂ ಒಪ್ಪಿದ್ದು ಎಲ್ಲ ತಯಾರಿ ನಡೆಯುತ್ತಿದೆ ಎನ್ನಲಾಗಿತ್ತು. ಆದ್ರೆ ಇದೆಲ್ಲದಕ್ಕೂ ರಣವೀರ್ ಸಿಂಗ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಣವೀರ್ ಸಿಂಗ್, ಈ ವರ್ಷ ದೀಪಿಕಾ ಜೊತೆ ಮದುವೆಯಾಗ್ತಿಲ್ಲ ಎಂದಿದ್ದಾರೆ. ಮದುವೆ ಬಗ್ಗೆ ಬಂದ ಎಲ್ಲ ಸುದ್ದಿಯೂ ಸುಳ್ಳು. ಅಧಿಕೃತ ಮೂಲದಿಂದ ಸುದ್ದಿ ಬಂದಿಲ್ಲವೆಂದ್ರೆ ಅದನ್ನು ನಂಬಬೇಡಿ. ಮದುವೆ ಫಿಕ್ಸ್ ಆದ್ರೆ ನಾನೇ ಎಲ್ಲರಿಗೂ ಹೇಳ್ತೇನೆ ಎಂದು ರಣವೀರ್ ಹೇಳಿದ್ದಾರೆ.

ರಣವೀರ್ ಈ ಸಂದರ್ಶನದ ಪ್ರತಿಯನ್ನು ರಣವೀರ್ ಅಭಿಮಾನಿಗಳು ಟ್ವೀಟರ್ ಅಕೌಂಟ್ ಗೆ ಅಪ್ಲೋಡ್ ಮಾಡಿದ್ದಾರೆ. ರಣವೀರ್ ಈ ವರ್ಷ ಮದುವೆಯಾಗ್ತಿಲ್ಲ ಎಂದಷ್ಟೇ ಹೇಳಿದ್ದಾರೆ. ದೀಪಿಕಾರನ್ನು ಮದುವೆಯಾಗ್ತಿಲ್ಲ ಎಂದಿಲ್ಲ. ಹಾಗಾಗಿ ದೀಪಿ-ರಣವೀರ್ ಮದುವೆ ನಿಶ್ಚಿತ. ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...