alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ನ್ಯೂ ಇಯರ್ ಸ್ವಾಗತಿಸಲಿದ್ದಾರೆ ದೀಪಿ-ರಣವೀರ್

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷವನ್ನು ವಿದೇಶದಲ್ಲಿ ಸ್ವಾಗತಿಸಲಿದ್ದಾರೆ. ಹಿಂದಿನ ವರ್ಷದಂತೆ ಈ ವರ್ಷ ಕೂಡ ಈ ಜೋಡಿ ನ್ಯೂ ಇಯರ್ ಗಾಗಿ ಪ್ಲಾನ್ ಮಾಡಿದೆ.

ಈ ಬಾರಿ ದೀಪಿಕಾ, ರಣವೀರ್ ಜೊತೆ ಶ್ರೀಲಂಕಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ದೀಪಿಕಾ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡಿದ್ದಳು. ಆಸ್ಟ್ರೇಲಿಯಾದಲ್ಲಿಯೇ ಇರುವ ದೀಪಿಕಾ ಅಲ್ಲಿಂದ ಶ್ರೀಲಂಕಾಕ್ಕೆ ಬರಲಿದ್ದಾಳೆ ಎನ್ನಲಾಗಿದೆ. ಅಲ್ಲಿ ರಣವೀರ್ ಸಿಂಗ್ ಜೊತೆ ಹೊಸ ವರ್ಷವನ್ನು ಸ್ವಾಗತಿಸಲಿದ್ದಾಳೆ.

ರಣವೀರ್ ಬೆಂಗಳೂರಿನಲ್ಲಿ ದೀಪಿಕಾ ಕುಟುಂಬಸ್ಥರ ಜೊತೆ ಹೊಸ ವರ್ಷ ಸ್ವಾಗತಿಸುವ ತಯಾರಿಯಲ್ಲಿದ್ದರು. ಆದ್ರೆ ಪ್ಲಾನ್ ಬದಲಾಗಿದೆ ಎಂದು ಮೂಲಗಳು ಹೇಳಿವೆ. ದೀಪಿಕಾ ಕುಟುಂಬಸ್ಥರನ್ನು ರಣವೀರ್ ಭೇಟಿಯಾಗುವ ಹಿಂದೆ ಮದುವೆ ಕಾರಣವಿದೆ ಎಂಬ ಗಾಳಿ ಸುದ್ದಿ ಓಡಾಡ್ತಿದೆ. ಶೀಘ್ರದಲ್ಲಿಯೇ ದೀಪಿ-ರಣವೀರ್ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ. ಎರಡು ವಾರಗಳ ಹಿಂದಷ್ಟೇ ಬೆಂಗಳೂರಿನಲ್ಲಿ ರಣವೀರ್, ಪ್ರಕಾಶ್ ಪಡುಕೋಣೆಯವರನ್ನು ಭೇಟಿಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...