alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗರಕ್ಷಕ-ಚಾಲಕರಿಗೂ ವಿವಾಹಕ್ಕೆ ಆಹ್ವಾನ ನೀಡಿದ್ದ ದೀಪ್-ರಣ್

ಅವರು ವೃತ್ತಿ ಅಂಗರಕ್ಷಕರು ಹಾಗೂ ಚಾಲಕರು. ಆದರೆ, ವಿವಾಹದ ನವೋಲ್ಲಾಸದಲ್ಲಿರುವ ಈ ತಾರಾ ಮಣಿಗಳಿಗೆ ಈ ಒಂದು ದಿನ ಮಟ್ಟಿಗೆ ಅವರು ಅತಿಥಿಗಳೇ ಆಗಿದ್ದರು.

ಯಾರ ಮದುವೆ, ಯಾರು ಅತಿಥಿ ಅಂದಿರಾ, ತಮ್ಮ ಭದ್ರತೆಗೆ ನಿಯೋಜನೆಯಲ್ಲಿರುವ ಅಂಗ ರಕ್ಷಕರು ಹಾಗೂ ಚಾಲಕರಿಗೆ ದೀಪಿಕಾ ಮತ್ತು ರಣವೀರ್ ಸಿಂಗ್ ವಿವಾಹಕ್ಕೆ ಆಹ್ವಾನ ನೀಡಿ ಸತ್ಕರಿಸಿ ಸುದ್ದಿಯಾಗಿದ್ದಾರೆ.

ಇಟಲಿಯಲ್ಲಿ ನಡೆದಿರುವ ವಿವಾಹ ಸಂದರ್ಭದಲ್ಲಿ ಸಮೀಪ ಬಂಧುಗಳು ಹಾಗೂ ಆತ್ಮೀಯರಿಗೆ ಆಹ್ವಾನ ನೀಡಿದ್ದಾರೆ. ವಿಶೇಷವೆಂದರೆ ತಮ್ಮ ಅಂಗರಕ್ಷಕರು ಮತ್ತು ವಾಹನ ಚಾಲಕರನ್ನು ಅವರು ಕಡೆಗಣಿಸದೆ ತಮ್ಮ ಆತ್ಮೀಯರ ಪಟ್ಟಿಯಲ್ಲಿ ಸೇರಿಸಿಕೊಂಡು ಕರೆದೊಯ್ದಿದ್ದಾರೆ.

ಅಷ್ಟೇ ಅಲ್ಲದೇ ಅಂಗ ರಕ್ಷಕರು ಮತ್ತು ವಾಹನ ಚಾಲಕರು ಸಾಂಪ್ರದಾಯಿಕ ಬಟ್ಟೆಯಲ್ಲಿ ವಿವಾಹ ಮಹೋತ್ಸವದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಸಡಗರದ ಫೋಟೋ ಹರಿದಾಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...