alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರೇಮಿ ಎದುರಲ್ಲೇ ರಣವೀರ್ ಜೊತೆ ದೀಪಿಕಾ ರೊಮ್ಯಾನ್ಸ್

ಬಾಲಿವುಡ್ ನ ಬಹುಚರ್ಚಿತ ಜೋಡಿ ಅಂದ್ರೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ. ಆಗಾಗ ಬ್ರೇಕಪ್ ಮೂಲಕವೂ ಇವರು ಸುದ್ದಿಯಲ್ಲಿರ್ತಾರೆ. ಆದ್ರೆ ಇಬ್ಬರ ನಡುವಣ ಕೆಮೆಸ್ಟ್ರಿ ಮಾತ್ರ ಎಲ್ಲರನ್ನೂ ಬೆರಗಾಗಿಸುತ್ತದೆ. ತಮ್ಮ ಲೇಡಿ ಲವ್ ಗಾಗಿ ಏನ್ಮಾಡೋಕೂ ರಣವೀರ್ ರೆಡಿ.

ಕೆಲದಿನಗಳ ಹಿಂದಷ್ಟೆ ರಣವೀರ್ ಹಾಗೂ ದೀಪಿಕಾ ಸ್ನೇಹಿತರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ರು. ದೀಪಿಯ ಮಾಜಿ ಗೆಳೆಯ ಹಾಗೂ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಅಲ್ಲಿದ್ರು. ಯುವರಾಜ್ ಪತ್ನಿ ಹೇಜಲ್ ಕೀಚ್ ಹಾಗೂ ರೋಹನ್ ಗವಾಸ್ಕರ್ ಕೂಡ ಪಾರ್ಟಿ ಎಂಜಾಯ್ ಮಾಡಿದ್ದಾರೆ.

ಪಾರ್ಟಿಯಲ್ಲಿ ದೀಪಿಕಾ ಹಾಗೂ ರಣವೀರ್ ಸಖತ್ ರೊಮ್ಯಾಂಟಿಕ್ ಮೂಡ್ ನಲ್ಲಿದ್ರು. ರಣವೀರ್ ಖುಷಿಖುಷಿಯಾಗಿ ಹರಟುತ್ತ ಗೆಳತಿಯನ್ನು ತಬ್ಬಿಕೊಂಡಿದ್ದಾರೆ. ಅಷ್ಟೇ ಅಲ್ಲ ದೀಪಿಕಾ ರಣವೀರ್ ತೊಡೆಮೇಲೆ ಕುಳಿತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಮಾಜಿ ಪ್ರೇಮಿ ಯುವರಾಜ್ ಎದುರಲ್ಲೇ ದೀಪಿಕಾ, ರಣವೀರ್ ಜೊತೆಗೆ ಸಖತ್ ಕ್ಲೋಸ್ ಆಗಿ ಮೂವ್ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...