alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಪ್ಪಿ-ರಣ್ವೀರ್ ಮದುವೆ ಡೇಟ್ ಫಿಕ್ಸ್…!

ಕೊನೆಗೂ ಬಿ ಟೌನ್ ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ನವೆಂಬರ್ 14, 15 ರಂದೇ ತಮ್ಮ ವಿವಾಹ ನಡೆಯಲಿರುವುದಾಗಿ ಖಚಿತಪಡಿಸಿದ್ದಾರೆ. ಈ ವಿಷಯವನ್ನು ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಪಡಿಸಿರುವುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಹೀಗಾಗಿ ಇನ್ನು ತಿಂಗಳ ಒಳಗಾಗಿ ವಿವಾಹ ಬಂಧನಕ್ಕೊಳಗಾಗುವ ಸುಂದರ ವಧುವಿನ ಮುಖದಲ್ಲಿ ಬೀಳುವ ಗುಳಿಯನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ. ಮೂಲಗಳ ಪ್ರಕಾರ ವಧು ಮತ್ತು ವರನ ಕುಟುಂಬಸ್ಥರು ಇದೀಗ ಮದುವೆ ಶಾಪಿಂಗ್ ನ ಬಿಝಿಯಲ್ಲಿದ್ದಾರೆ.

ದೀಪಿಕಾ ಪಡುಕೋಣೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಿಂದಿಯಲ್ಲಿರುವ ತನ್ನ ವಿವಾಹದ ಆಮಂತ್ರಣ ಪತ್ರಿಕೆಯನ್ನೂ ಅಪ್ ಲೋಡ್ ಮಾಡಿದ್ದಾರೆ. ಆದರೆ ಒಂದೇ ಒಂದು ಬೇಸರದ ಸಂಗತಿಯೆಂದರೆ ಮದುವೆ ಎಲ್ಲಿ ಎಂದು ಇಡೀ ಇನ್ವಿಟೇಶನ್ ಅನ್ನು ನೂರು ಬಾರಿ ಹುಡುಕಿದರೂ ಸಿಕ್ಕಿಲ್ಲ!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...