alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿ ಮದುವೆಯಲ್ಲಿ ಕ್ಯಾಮರಾ, ಮೊಬೈಲ್ ಬ್ಯಾನ್

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ನವೆಂಬರ್ 2 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಣವೀರ್-ದೀಪಿಕಾ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ಮದುವೆ ಸಮಾರಂಭಕ್ಕೆ ಕೇವಲ 30 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆಯಂತೆ.

ವಿಶೇಷ ಹಾಗೂ ಖಾಸಗಿತನಕ್ಕೆ ಹೆಚ್ಚು ಮಹತ್ವ ನೀಡಿರುವ ದೀಪಿಕಾ, ಮದುವೆ ಸಮಾರಂಭಕ್ಕೆ ಬರುವವರಿಗೆ ಮೊಬೈಲ್, ಕ್ಯಾಮರಾ ತರದಂತೆ ಮನವಿ ಮಾಡಿದ್ದಾರಂತೆ. ಅನುಷ್ಕಾ ಶರ್ಮಾ ಹಾಗೂ ಸೋನಂ ಕಪೂರ್ ಮದುವೆಯಿಂದ ಬುದ್ದಿ ಕಲಿತಿರುವ ದೀಪಿಕಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಮದುವೆಗೆ ಬರುವ ಸಂಬಂಧಿಕರು ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ದೀಪಿಕಾಗೆ ಇಷ್ಟವಿಲ್ಲವಂತೆ. ಮದುವೆ ಫೋಟೋ ಲೀಕ್ ಆಗದಿರಲಿ ಎನ್ನುವ ಕಾರಣಕ್ಕೆ ದೀಪಿಕಾ, ಮೊಬೈಲ್, ಕ್ಯಾಮರಾ ತರದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ದೀಪಿಕಾ ಹಾಗೂ ರಣವೀರ್ ತಮ್ಮ ಮದುವೆ ವಿಚಾರ ಹಾಗೂ ಫೋಟೋವನ್ನು ತಾವೇ ಅಭಿಮಾನಿಗಳಿಗೆ ತಿಳಿಸಲು ಬಯಸಿದ್ದಾರೆ ಎನ್ನಲಾಗಿದೆ. ಮದುವೆ ಇಟಲಿಯ ಲೇಕ್ ಕೊಮೊದಲ್ಲಿ ನಡೆಯಲಿದೆ.

ದೀಪಿಕಾಗೆ ಇಟಲಿ ತುಂಬಾ ಇಷ್ಟ. ಇದೇ ಕಾರಣಕ್ಕೆ ಇಟಲಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾಳೆಂದು ಸಂಬಂಧಿಕರು ಹೇಳಿದ್ದಾರೆ. ದಿನಾಂಕ ಫಿಕ್ಸ್ ಆಗ್ತಿದ್ದಂತೆ ಆಹ್ವಾನಿತರ ಪಟ್ಟಿ ಸಿದ್ಧವಾಗಿದೆ. ಇದ್ರಲ್ಲಿ ಕಬೀರ್ ಬೇಡಿ ಹೆಸರು ಮೊದಲಿದೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...