alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ…! ದೀಪಿ ಧರಿಸಿರೋ ಈ ಗೌನ್ ಬೆಲೆ ಕೇಳಿದ್ರಾ?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ಮದುವೆ ವಿಚಾರಕ್ಕೆ ಚರ್ಚೆಯಲ್ಲಿದ್ದಾಳೆ. ದೀಪಿಕಾ-ರಣವೀರ್ ಸಿಂಗ್ ಮದುವೆ ನವೆಂಬರ್ ನಲ್ಲಿ ನಡೆಯುತ್ತೆ ಎನ್ನಲಾಗ್ತಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ದೀಪಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾಳೆ. ಇದ್ರಲ್ಲಿ ಏನೂ ವಿಶೇಷವಿಲ್ಲ. ಆದ್ರೆ ದೀಪಿ ತೊಟ್ಟಿದ್ದ ಗೌನ್ ಚರ್ಚೆಗೆ ಕಾರಣವಾಗಿದೆ.

ದೀಪಿಕಾ ಧರಿಸಿದ್ದ ಕಂದು ಬಣ್ಣದ ಗೌನ್ ಬೆಲೆ 50-60 ಸಾವಿರವಲ್ಲ ಸ್ವಾಮಿ. ಬರೋಬ್ಬರಿ 2 ಲಕ್ಷ ರೂಪಾಯಿಯದ್ದು. ದೀಪಿಕಾಳ ಈ ವಿಂಟೇಜ್ ಗೌನ್ Burberry ಕಂಪನಿಯದ್ದು. ಇದ್ರ ಜೊತೆ ದೀಪಿ ಲಾಂಗ್ ಹೈವೆಸ್ಟ್ ಜೀನ್ಸ್ ಹಾಗೂ ಬಿಳಿ ಟೀ ಶರ್ಟ್ ಧರಿಸಿದ್ದಳು. ಕಂದು ಬಣ್ಣದ ಲೆದರ್ ಬ್ಯಾಗ್ ಹಿಡಿದಿದ್ದ ದೀಪಿ ಸುಂದರವಾಗಿ ಕಾಣ್ತಿದ್ದಳು.

ಸದ್ಯ ದೀಪಿಕಾ ಯಾವುದೇ ಸಿನಿಮಾ ಮಾಡ್ತಿಲ್ಲ. ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿರುವ ದೀಪಿಕಾ ಮದುವೆಗೆ ತಯಾರಿ ನಡೆಸುತ್ತಿದ್ದಾಳೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ರಣವೀರ್ ಸಿಂಗ್ ತಾಯಿಯನ್ನು ದೀಪಿಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಫಾಲೋ ಮಾಡ್ತಿದ್ದಾಳೆ. ರಣವೀರ್ ಸಿಂಗ್, ದೀಪಿಕಾ ಸಹೋದರಿಯನ್ನು ಫಾಲೋ ಮಾಡ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...