alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತ್ ನಂತ್ರ ಖತರ್ನಾಕ್ ಪಾತ್ರದಲ್ಲಿ ದೀಪಿಕಾ

ಪದ್ಮಾವತ್ ಯಶಸ್ಸಿನ ನಂತ್ರ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮುಂದಿನ ಚಿತ್ರದ ತಯಾರಿ ಶುರು ಮಾಡಿದ್ದಾಳೆ. ದೀಪಿಕಾ ಪಡುಕೋಣೆ ಲೇಡಿ ಡಾನ್ ಚಿತ್ರದಲ್ಲಿ ನಟಿಸಲಿದ್ದಾಳೆ. ಗ್ಯಾಂಗ್ ಸ್ಟಾರ್ ಸ್ವಪ್ನ ದೀದಿ ಪಾತ್ರಕ್ಕೆ ದೀಪಿ ಬಣ್ಣ ಹಚ್ಚಲಿದ್ದಾಳೆ.

ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ, ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ್ ನಂತೆ ಮುಂದಿನ ಚಿತ್ರ ಕೂಡ ಮಹಿಳಾ ಪ್ರಧಾನ ಚಿತ್ರವಾಗಿದೆ ಎಂದಿದ್ದಾಳೆ. ಹುಸೇನ್ ಝೈದಿ ಪುಸ್ತಕ ಮಾಫಿಯಾ ಕ್ವೀನ್ ಆಫ್ ಮುಂಬೈ ಆಧಾರಿತ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾಳೆ.

ಚಿತ್ರಕ್ಕಾಗಿ ಅನೇಕ ಕಾರ್ಯಾಗಾರ ನಡೆಸುತ್ತಿರುವ ದೀಪಿ ಚಿತ್ರಕ್ಕೆ ಸಿದ್ಧವಾಗ್ತಿದ್ದಾಳಂತೆ. ವಿಶಾಲ್ ಭಾರದ್ವಾಜ್ ಜೊತೆ ಇದೇ ಮೊದಲ ಬಾರಿ ದೀಪಿಕಾ ಕೆಲಸ ಮಾಡಲಿದ್ದಾಳೆ. ದೀಪಿಕಾ ಪದ್ಮಾವತಿ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಗ್ ಬಿ ಮೆಚ್ಚುಗೆಯ ದೊಡ್ಡ ಪತ್ರವನ್ನೇ ದೀಪಿಕಾಗೆ ಕಳುಹಿಸಿದ್ದಾರೆ. ಮುಂದಿನ ಚಿತ್ರವನ್ನೂ ಜನರು ಮೆಚ್ಚಿಕೊಳ್ಳಲಿದ್ದಾರೆಂದು ದೀಪಿಕಾ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...