alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ತೆಗೆದ ಯುವತಿ ಮೇಲೆ ಹಲ್ಲೆ ನಡೆಸಿದ್ರಾ ದೀಪಿಕಾ-ರಣವೀರ್…?

ದೀಪಿಕಾ ಮತ್ತು ರಣವೀರ್ ಬಾಲಿವುಡ್ ನ ಪ್ರಣಯ ಪಕ್ಷಿಗಳು ಅನ್ನೋದು ಈಗ ಗುಟ್ಟಿನ ವಿಚಾರವೇನು ಅಲ್ಲ. ತಮ್ಮ ಪ್ರೀತಿಯನ್ನ ಬಾಯಿಬಿಟ್ಟು ಒಪ್ಪಿಕೊಳ್ಳದಿದ್ದರು ಪರೋಕ್ಷವಾಗಿ ಒಪ್ಪಿಕೊಂಡಂತಾ ಅನೇಕ ಘಟನೆಗಳು ನಡೆದಿವೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಿರುವಾಗ್ಲೇ ಇತ್ತೀಚೆಗೆ ಅಮೆರಿಕದ ಡಿಸ್ನಿಲ್ಯಾಂಡ್ ನಲ್ಲಿ ಕೈ ಕೈ ಹಿಡಿದ ದೀಪ್-ವೀರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ವಾಗ್ದಾಳಿ ನಡೆಸಿರುವ ಘಟನೆ ನಡೆದಿದೆ.

ಅಮೆರಿಕದ ಡಿಸ್ನಿಲ್ಯಾಂಡ್ ನಲ್ಲಿ ದೀಪಿಕಾ ಮತ್ತು ರಣವೀರ್ ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದರು. ಈ ವೇಳೇ ದೀಪ್-ವೀರ್ ಜೋಡಿಯನ್ನು ಗುರುತಿಸಿದ ಯುವತಿಯೊಬ್ಬಳು ಆ ವಿಡಿಯೋವನ್ನು ರೆಕಾರ್ಡ್ ಮಾಡುತ್ತಾ ಅವರಿಬ್ಬರತ್ತ ತೆರಳಿದ್ದಾರೆ. ಈ ವೇಳೇ ದೀಪಿಕಾರನ್ನ ಆಕೆ ಮಾತಿಗೆಳೆದಿದ್ದಾರೆ. ಆನಂತರದಲ್ಲಿ ಏನು ನಡೀತು ಅನ್ನೋದು ಆ ವಿಡಿಯೋದಲ್ಲಿ ರೆಕಾರ್ಡ್ ಆಗಿಲ್ಲ. ಆದ್ರೆ ಆನಂತರದಲ್ಲಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಮತ್ತು ರಣವೀರ್ ವಿರುದ್ಧ ಕೆಂಡಾಮಂಡಲಳಾಗಿಬಿಟ್ಟಿದ್ದಾಳೆ.

ಜೈನಾಬ್ ಖಾನ್ ಹೆಸರಿನ ಯುವತಿ ಸರಣಿ ಟ್ವೀಟ್ಗಳ ಮೂಲಕ ದೀಪ್ವೀರ್ ಜೋಡಿಯನ್ನ ಆಕೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಇಬ್ಬರ ತಲೆಯಲ್ಲೂ ಸ್ಟಾರ್ ಡಮ್ ಮನೆ ಮಾಡಿಬಿಟ್ಟಿದೆ. ಅಭಿಮಾನಿಗಳ ಪ್ರೀತಿಗೆ ಇವರಿಬ್ಬರು ಯೋಗ್ಯರಲ್ಲ ಅಂತ ಕಾಮೆಂಟ್ ಮಾಡಿದ್ದಾಳೆ.

ಈ ಟ್ವೀಟ್ಗೆ ದೀಪಿಕಾ ಮತ್ತು ರಣವೀರ್ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ತಮ್ಮ ನೆಚ್ಚಿನ ಜೋಡಿಯ ಬೆಂಬಲಕ್ಕೆ ನಿಂತಿದ್ದಾರೆ. ಸ್ಟಾರ್ ಆದ ಮಾತ್ರಕ್ಕೆ ಅವರಿಗೆ ಸ್ವಾತಂತ್ರ ಇಲ್ಲವೆಂದು ಅರ್ಥವಲ್ಲ. ಅವರ ಖಾಸಗಿ ಜೀವನವನ್ನು ಗೌರವಿಸದೆ ನಡೆದುಕೊಂಡಿದ್ದು ನಿನ್ನ ತಪ್ಪು ಅಂತ ಜೈನಾಬ್ ಖಾನ್ ಗೆ ಬುದ್ಧಿವಾದ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...