alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿ-ರಣವೀರ್ ಮದುವೆಗೆ ಮುಹೂರ್ತ ಫಿಕ್ಸ್

ಬಾಲಿವುಡ್ ಇನ್ನೊಂದು ಅದ್ಧೂರಿ ಮದುವೆಗೆ ಸಿದ್ಧವಾಗ್ತಿದೆ. ಬಾಲಿವುಡ್ ಹಾಟ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲಗಳ ಪ್ರಕಾರ ದೀಪಿ-ರಣವೀರ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.

ಮಾಧ್ಯಮಗಳ ವರದಿ ಪ್ರಕಾರ, ದೀಪಿ ಹಾಗೂ ರಣವೀರ್ ಕುಟುಂಬ ಸೇರಿ ಮದುವೆ ಮಾತುಕತೆ ನಡೆಸಿದೆ. ವರ್ಷಾಂತ್ಯದಲ್ಲಿ ಮದುವೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ನಾಲ್ಕು ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಅದ್ರಲ್ಲಿ ಒಂದು ದಿನಾಂಕವನ್ನು ಕುಟುಂಬಸ್ಥರು ಫೈನಲ್ ಮಾಡಲಿದ್ದಾರೆ.

ದೀಪಿಕಾ ಹಾಗೂ ರಣವೀರ್ ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬಂದಿದ್ದಾರೆ. ಈ ಅವಧಿಯಲ್ಲಿ ಎರಡು ಕುಟುಂಬಗಳು ಅನೇಕ ಬಾರಿ ಭೇಟಿಯಾಗಿ ಮಾತುಕತೆ ನಡೆಸಿವೆ ಎನ್ನಲಾಗಿದೆ. ಮದುವೆ ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಸೆಪ್ಟೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಮದುವೆ ನಡೆಯಲಿದೆ.

ಮದುವೆಗೆ ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಮಾತ್ರ ಕರೆಯಲು ನಿರ್ಧರಿಸಲಾಗಿದೆ.ಕಳೆದ ವಾರ ತಾಯಿ ಹಾಗೂ ಸಹೋದರಿ ಜೊತೆ ದೀಪಿಕಾ ಆಭರಣ ಖರೀದಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...