alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷಗಳ ನಂತ್ರ ರಿಮೇಕ್ ಆಗ್ತಿರುವ ಚಿತ್ರಕ್ಕೆ ಆಲಿಯಾ ಫೈನಲ್

ಬಾಲಿವುಡ್ ದೇವಿ ಶ್ರೀದೇವಿ ಅಭಿನಯದ ಚಾಲ್ ಬಾಜ್ ಚಿತ್ರ 25 ವರ್ಷಗಳ ನಂತ್ರ ರಿಮೇಕ್ ಆಗ್ತಿದೆ. ಡೇವಿಡ್ ಧವನ್ ಈ ಚಿತ್ರವನ್ನು ರಿಮೇಕ್ ಮಾಡ್ತಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್ ಡಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗ್ತಿದೆ.

ಚಿತ್ರದ ಬಗ್ಗೆ ಮಾತನಾಡಿದ ಶ್ರೀದೇವಿ ಆಲಿಯಾ ಭಟ್ ಪಾತ್ರಕ್ಕೆ ಒಪ್ಪುತ್ತಾಳೆ ಎಂದಿದ್ದಾರೆ. ಶ್ರೀದೇವಿ, ರಜನಿಕಾಂತ್, ಸನ್ನಿ ಡಿಯೋಲ್ ಅಭಿನಯದ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಚಿತ್ರದ ಮೇಲೆ ಕಣ್ಣಿಟ್ಟಿದ್ದ ಡೇವಿಡ್ ರಿಮೇಕ್ ಮಾಡುವ ಬಗ್ಗೆ ಅನೇಕ ದಿನಗಳಿಂದ ಪ್ಲಾನ್ ಮಾಡುತ್ತಿದ್ದರು. ಚಿತ್ರಕ್ಕೆ ಹೊಸ ರೂಪ ನೀಡುವ ತಯಾರಿಯಲ್ಲಿದ್ದರು. ಚಿತ್ರದಲ್ಲಿ ಲೀಡ್ ರೋಲ್ ಹಾಗೂ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಶ್ರೀದೇವಿ ಪಾತ್ರಕ್ಕೆ ಹೊಂದುವ ನಟಿಯ ಹುಡುಕಾಟ ನಡೆದಿತ್ತು.

ಡೇವಿಡ್ ಧವನ್ ಈ ಬಗ್ಗೆ ಆಲಿಯಾ ಭಟ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ಪಾತ್ರದಲ್ಲಿ ಡೇವಿಡ್ ಮಗ ವರುಣ್ ಧವನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...