alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ ನಟ ಚೇತನ್

ದಾವಣಗೆರೆ: ಚಿತ್ರರಂಗದ ಆರಂಭದಿಂದಲೂ ಕಾಸ್ಟಿಂಗ್ ಕೌಚ್ ಇದೆ. ಇದನ್ನು ಹೋಗಲಾಡಿಸಲು ಸಾಮೂಹಿಕ ಜವಾಬ್ದಾರಿ ಅಗತ್ಯವಾಗಿದೆ ಎಂದು ನಟ ಚೇತನ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಜಿಲ್ಲಾ ವರದಿಗಾರರ ಕೂಟ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹಿರಿಯ ಕಲಾವಿದರು ಇಂತಹ ಬೆಳವಣಿಗೆಗಳ ಬಗ್ಗೆ ಮೌನ ಮುರಿಯಬೇಕಿದೆ ಎಂದು ತಿಳಿಸಿದ್ದಾರೆ.

ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಟ ನಡೆಸಲು ಸಮಾನ ಮನಸ್ಕರೆಲ್ಲಾ ಸೇರಿ ‘ಫೈರ್’ ಎಂಬ ಸಂಘಟನೆ ಆರಂಭಿಸಿದ್ದೇವೆ. ಅನೇಕ ಕಲಾವಿದರು ದೂರು ನೀಡಿದ್ದು, ಕಾನೂನು ಹೋರಾಟ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಿಂದಿನಿಂದಲೂ ಇದೆ. ಹಿರಿಯರು ಈ ಕುರಿತು ಮೌನ ಮುರಿದು ಮುಕ್ತವಾಗಿ ಮಾತನಾಡಬೇಕಿದೆ. ಇಲ್ಲದಿದ್ದರೆ, ಇದಕ್ಕೆ ಅವರ ಸಹಮತವಿದೆ ಎನ್ನುವಂತಾಗುತ್ತದೆ. ತಮಗಾದ ಅನ್ಯಾಯವನ್ನು ಹೇಳಿಕೊಂಡರೆ ಕಾಸ್ಟಿಂಗ್ ಕೌಚ್ ತೊಲಗಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...