alex Certify
ಕನ್ನಡ ದುನಿಯಾ       Mobile App
       

Kannada Duniya

ವೈಯಕ್ತಿಕ ಬದುಕಿನ ಕಹಿ ಸತ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ

ಸಂಜಯ್‌ ದತ್‌, ಅಮೀರ್‌ ಖಾನ್, ಜೂಹಿ ಚಾವ್ಲಾ ಸೇರಿದಂತೆ ಆನೇಕ ತಾರೆಯರ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಮಹೇಶ್ ಭಟ್‌, ತಮ್ಮ ಪುತ್ರಿ ತೆಗೆದುಕೊಂಡಿದ್ದ ಅನಾಹುತಕಾರಿ ನಿರ್ಧಾರವೊಂದರ ಕುರಿತ ಮಾಹಿತಿಯನ್ನು ಈಗ ಬಹಿರಂಗಗೊಳಿಸಿದ್ದಾರೆ.

‘ದಿ ಡಾರ್ಕ್‌ ಸೈಡ್‌ ಆಫ್‌ ಲೈಫ್‌’ ಎಂಬ ಚಿತ್ರ ಹಾಗೂ ತಮ್ಮ ವೈಯಕ್ತಿಕ ಜೀವನಕ್ಕೆ ಸಾಮ್ಯತೆ ಇದೆ. ಈ ಕಥೆ ತಮ್ಮ ವೈಯಕ್ತಿಕ ಜೀವನದಿಂದಲೇ ಪ್ರೇರಣೆ ಪಡೆದಿದೆ. ಅಲ್ಲದೆ ಇದು ನನ್ನ ನಿಜ ಜೀವನದಲ್ಲಿ ಕಂಡ ಒಂದಂಶದ ಕಥೆಯ ಆಧಾರಿತ ಚಿತ್ರವಾಗಿದೆ ಎಂದು ಮಹೇಶ್‌ ಭಟ್‌ ಹೇಳಿಕೊಂಡಿದ್ದಾರೆ.

ತಮ್ಮ ಪುತ್ರಿ ಶಾಹೀನ್‌ ಮಾನಸಿಕ ಖಿನ್ನತೆಗೆ ಒಳಗಾಗಿ 12ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. 16ನೇ ವಯಸ್ಸಿನಲ್ಲಿ ಅವಳು ಖಿನ್ನತೆಯಿಂದ ಬಳಲುತ್ತಿರುವುದು ನಮಗೆ ತಿಳಿದು ಬಂದಿತ್ತು. ಇದು ನನ್ನ ಮನೆಯ ಸತ್ಯಕಥೆ ಎಂದು ಅವರು ಹೇಳಿಕೊಳ್ಳುವ ಮೂಲಕ ಮೊದಲ ಬಾರಿಗೆ ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿದ್ದಾರೆ.

ಜಿಯಾ ಖಾನ್‌ ಒಂದು ಬಾರಿ ಚಿತ್ರದಲ್ಲಿ ಅವಕಾಶ ಕೇಳಿಕೊಂಡು ಮನೆಗೆ ಬಂದಿದ್ದರು. ಆದರೆ ಆ ವೇಳೆ ನನಗೆ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಕೆಲ ಸಮಯದ ಬಳಿಕ ಜಿಯಾ ಖಾನ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ನನಗಾದ ನೋವು ಅಷ್ಟಿಷ್ಟಲ್ಲ ಎಂದೂ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರೋದ್ಯಮ ಬಹಳ ಒತ್ತಡದ ಕೆಲಸವಾಗಿದ್ದು, ಇಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಆಧಾರದಲ್ಲಿ ನಮ್ಮ ಭವಿಷ್ಯ ನಿರ್ಣಯವಾಗುತ್ತದೆ. ಹೀಗಾಗಿ, ಬಹುತೇಕರು ಮಾದಕ ವಸ್ತುಗಳ ಬಳಕೆ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.

ಟ್ರೈಲರ್ ಬಿಡುಗಡೆ ಮಾಡಿದಾಗ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಭಯ ಇದ್ದೇ ಇರುತ್ತದೆ. ಜನ ಚಪ್ಪಾಳೆ ಹೊಡೆಯುತ್ತಾರೋ ಅಥವಾ ಇಲ್ಲವೋ ಎಂಬ ಭೀತಿ ನಮ್ಮನ್ನು ಕಾಡುತ್ತದೆ. ಚಿತ್ರರಂಗದಲ್ಲಿ ದೀರ್ಘ ಕಾಲ ಉಳಿದುಕೊಂಡಿರುವವರು ಬಹಳ ಕಡಿಮೆ ಜನರು ಮಾತ್ರ ಎಂದಿದ್ದಾರೆ.

ಇಂದಿನ ದಿನದಲ್ಲಿ ಯುವಜನತೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಚಿತ್ರ ತಯಾರಿಸಲಾಗುತ್ತಿದ್ದು, ತಮ್ಮ ಜೀವನದ ಒಂದು ಸಣ್ಣ ಕಥೆಯ ಮೂಲಕ ಈ ಹೊಸ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...