alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯನ್ನೇ ಫಾಲೋ ಮಾಡುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ

ಸಾಮಾನ್ಯವಾಗಿ ಗಂಡು ಮಕ್ಕಳು ತಮ್ಮ ತಂದೆಯ ಹಾಗೇ ಗುಣ ನಡತೆಯನ್ನು ಹೊಂದಿರುತ್ತಾರೆ. ಇದಕ್ಕೆ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಕೂಡ ಹೊರತಲ್ಲ. ಆತ ಕೂಡ ತನ್ನ ತಂದೆಯನ್ನೇ ಫಾಲೋ ಮಾಡುತ್ತಿದ್ದಾರೆ.

ಹೌದು, ಪ್ರಾಣಿಗಳನ್ನು ತುಂಬಾ ಪ್ರೀತಿಸುವ ನಟ ದರ್ಶನ್, ಈಗಾಗಲೇ ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಹಾಗೇ ಇವರಿಗೆ ಕುದುರೆ ಅಂದರೆ ಅಚ್ಚುಮೆಚ್ಚು, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಕೂಡ ಮಾಡಿದ್ದಾರೆ.

ಅದೇ ರೀತಿ ದರ್ಶನ್ ಅವರ ಮಗ ವಿನೀಶ್ ಗೂ ಕೂಡ ಪ್ರಾಣಿಗಳೆಂದರೆ ಬಹಳ ಪ್ರೀತಿ. ಆದ್ದರಿಂದ ಈತ ಕೂಡ ಕುದುರೆಯೊಂದನ್ನು ಸಾಕುತ್ತಿರುವುದಲ್ಲದೇ ಅದರ ಮೇಲೆ ಸವಾರಿ ಮಾಡುವುದನ್ನು ಕೂಡ ಅಭ್ಯಾಸ ಮಾಡುತ್ತಿದ್ದಾರೆ. ವಿನೀಶ್ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಲ್ಲದೇ ವಿನೀಶ್ ಕೂಡ ತಂದೆಯಂತೆ ಒಬ್ಬ ಒಳ್ಳೆ ನಟನಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈತ ಈಗಾಗಲೇ ತನ್ನ ತಂದೆ ದರ್ಶನ್ ಜೊತೆ ‘ಐರಾವತ’ ಹಾಗೂ ‘ಯಜಮಾನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...