alex Certify
ಕನ್ನಡ ದುನಿಯಾ       Mobile App
       

Kannada Duniya

ಭಗತ್ ಸಿಂಗ್ ಆಗ್ತಿದ್ದಾರೆ ಡಿ ಬಾಸ್

ಪ್ರಜ್ವಲ್ ದೇವರಾಜ್ ಮತ್ತು ಭಾವನಾ ಅಭಿನಯದ ಇನ್ಸ್ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪೆಷಲ್ ರೋಲ್ನಲ್ಲಿ ಕಾಣಿಸಿಕೊಳ್ತಿದ್ದಾರೆ ಅನ್ನೋದು ಈ ಹಿಂದೆ ಸುದ್ದಿಯಾಗಿತ್ತು. ದರ್ಶನ್ ಯಾವ ಪಾತ್ರದಲ್ಲಿ ನಟಿಸ್ತಿದ್ದಾರೆ, ಅವರ ಕ್ಯಾರೆಕ್ಟರ್ ಹೇಗೆ ಡಿಸೈನ್ ಮಾಡಲಾಗಿದೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಚಿತ್ರದಲ್ಲಿ ದರ್ಶನ್ ಕ್ರಾಂತಿಕಾರಿ ಭಗತ್ ಸಿಂಗ್ ರೋಲ್ ಪ್ಲೇ ಮಾಡ್ತಿದ್ದಾರಂತೆ.

ಪುಷ್ಪಕ ವಿಮಾನ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ನರಸಿಂಹ ಈ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ. ಚಿತ್ರದ ಪ್ರಮುಖ ಘಟ್ಟವೊಂದರಲ್ಲಿ ಭಗತ್ ಸಿಂಗ್ ಪಾತ್ರ ಬರಲಿದೆ. ಅದಕ್ಕಾಗಿ ನಾವು ಆರು ಅಡಿ ಎತ್ತರದ ಅಜಾನುಬಾಹು ನಟರನ್ನ ಹುಡುಕುತ್ತಿದ್ವಿ.

ಆ ನಂತರದಲ್ಲಿ ದರ್ಶನ್ ಹೊರತಾಗಿ ಮತ್ತಾರು ಈ ಪಾತ್ರವನ್ನು ನಿರ್ವಹಿಸೋದಕ್ಕೆ ಸಾಧ್ಯವಿಲ್ಲ ಅನ್ನಿಸಿತು. ಕೂಡಲೇ ದರ್ಶನ್ ಅವರಿಗೆ ಪಾತ್ರದ ಬಗ್ಗೆ ಹೇಳಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ದರ್ಶನ್ ನಮ್ಮ ಚಿತ್ರತಂಡದ ಭಾಗವಾಗ್ತಿರೋದೇ ಹೆಮ್ಮೆಯ ವಿಚಾರ ಅಂತಿದೆ ಚಿತ್ರತಂಡ.

ಚಿತ್ರದ ನಾಯಕ ಮತ್ತು ನಾಯಕಿ ಕೂಡ ದರ್ಶನ್ ಅವರೊಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಸಂಗೊಳ್ಳಿ ರಾಯಣ್ಣ ನಂತರ ಮತ್ತೆ ಚಾಲೆಂಜಿಂಗ್ ಸ್ಟಾರ್ ಸ್ವಾತಂತ್ರ್ಯ ಸೇನಾನಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...