alex Certify
ಕನ್ನಡ ದುನಿಯಾ       Mobile App
       

Kannada Duniya

ತಾರಕೋತ್ಸವದೊಂದಿಗೆ ದರ್ಶನ್ ಫ್ಯಾನ್ಸ್ ದಸರಾ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಲಕ್ಷ್ಮಣ್ ದುಷ್ಯಂತ್ ನಿರ್ಮಾಣದಲ್ಲಿ, ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ತಾರಕ್’ ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಂದು ಭರ್ಜರಿಯಾಗಿ ತೆರೆ ಕಾಣಲಿದೆ.

ದರ್ಶನ್ ಅಭಿಮಾನಿಗಳ ಸಂಭ್ರಮವಂತೂ ಇಮ್ಮಡಿಸಿದೆ. ದಸರಾ ಹಬ್ಬದ ಜೊತೆಗೆ ನೆಚ್ಚಿನ ನಟನ ಚಿತ್ರ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳ ಸಂಭ್ರಮವನ್ನು ಹೆಚ್ಚು ಮಾಡಿದೆ.

ಈಗಾಗಲೇ ಟೀಸರ್, ಟ್ರೇಲರ್ ಮೂಲಕ ‘ತಾರಕ್’ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಇನ್ನು ಚಿತ್ರ ಬಿಡುಗಡೆಯಾಗಲಿರುವ ಕೆಲವು ಚಿತ್ರ ಮಂದಿರಗಳ ಬಳಿ ದರ್ಶನ್ ಅವರ ಬೃಹತ್ ಕಟೌಟ್ ಗಳು ರಾರಾಜಿಸುತ್ತವೆ.

ತಾರಕೋತ್ಸವಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ಸೆಪ್ಟಂಬರ್ 28 ರ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭಿಸಬೇಕೆಂಬುದು ಅಭಿಮಾನಿಗಳ ಒತ್ತಾಯವಾಗಿದೆ. ಚಿತ್ರದಲ್ಲಿ ದರ್ಶನ್, ದೇವರಾಜ್, ಶಾನ್ವಿ ಶ್ರೀವಾಸ್ತವ್, ಶ್ರುತಿ ಹರಿಹರನ್ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...