alex Certify
ಕನ್ನಡ ದುನಿಯಾ       Mobile App
       

Kannada Duniya

ತಾರಕೋತ್ಸವಕ್ಕೆ ಸಜ್ಜಾದ ದರ್ಶನ್ ಅಭಿಮಾನಿಗಳು

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಇದೇ ಸೆಪ್ಟಂಬರ್ 29 ರಂದು ತೆರೆ ಕಾಣಲಿದೆ.

ನೆಚ್ಚಿನ ನಟನ ಚಿತ್ರ ಬಿಡುಗಡೆಯಾಗುತ್ತಿರುವುದು ದರ್ಶನ್ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಲಕ್ಷ್ಮಣ್ ದುಷ್ಯಂತ್ ನಿರ್ಮಾಣ, ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ತಾರಕ್’ ಚಿತ್ರದಲ್ಲಿ ದರ್ಶನ್ ರಗ್ಬಿ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಟೀಸರ್, ಟ್ರೇಲರ್ ಮೂಲಕ ಕಮಾಲ್ ಮಾಡಿರುವ ‘ತಾರಕ್’ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ದರ್ಶನ್, ದೇವರಾಜ್, ಶಾನ್ವಿ ಶ್ರೀವಾಸ್ತವ್, ಶ್ರುತಿ ಹರಿಹರನ್ ಮೊದಲಾದವರು ಅಭಿನಯಿಸಿದ್ದಾರೆ. ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ದರ್ಶನ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ.

ಸೆಪ್ಟಂಬರ್ 28 ರ ಮಧ್ಯರಾತ್ರಿಯಿಂದಲೇ ಪ್ರದರ್ಶಿಸಬೇಕು. ಸೋಮವಾರದಿಂದಲೇ ಮುಂಗಡ ಬುಕ್ಕಿಂಗ್ ಶುರುಮಾಡಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...