alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ನಿರ್ಧಾರ ಕೈಗೊಂಡಿದ್ದಾರೆ ದರ್ಶನ್

tark-dar-bos

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಆಡಿಯೋ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ.

ಇದೇ ಸಂದರ್ಭದಲ್ಲಿ ದರ್ಶನ್ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ತಮ್ಮ ಚಿತ್ರಗಳಿಗೆ 65 ದಿನ ಮಾತ್ರ ಕಾಲ್ ಶೀಟ್ ಕೊಡಲು ತೀರ್ಮಾನಿಸಿದ್ದಾರೆ.

ಹಲವಾರು ಕಾರಣಗಳಿಂದ ಸಿನಿಮಾ ಮುಗಿಯುವುದು ವಿಳಂಬವಾಗುತ್ತದೆ. ಇದರಿಂದ ಬೇರೆ ಚಿತ್ರಗಳಲ್ಲಿ ಅಭಿನಯಿಸಲು ಕಲಾವಿದರಿಗೆ ಸಮಸ್ಯೆಯಾಗುತ್ತದೆ. ಚಿತ್ರ ನಿರ್ಮಾಣ ವೆಚ್ಚವೂ ಹೆಚ್ಚಾಗುತ್ತದೆ.

ಇದನ್ನೆಲ್ಲಾ ಗಮನಿಸಿರುವ ದರ್ಶನ್ 65 ದಿನ ಮಾತ್ರ ಕಾಲ್ ಶೀಟ್ ಕೊಡಲು ತೀರ್ಮಾನಿಸಿದ್ದು, ಅನಿವಾರ್ಯ ಸಂದರ್ಭಗಳಲ್ಲಿ 5 ದಿನ ಹೆಚ್ಚುವರಿಯಾಗಿ ಡೇಟ್ ಕೊಡಲಿದ್ದಾರೆ. ‘ತಾರಕ್’ ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ ಈ ಕುರಿತು ದರ್ಶನ್ ಮಾತನಾಡಿದ್ದಾರೆ.

‘ತಾರಕ್’ ಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಪ್ರಕಾಶ್ ನಿರ್ದೇಶನ, ಲಕ್ಷ್ಮಣ್ ದುಷ್ಯಂತ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ದರ್ಶನ್, ದೇವರಾಜ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ಮೊದಲಾದವರು ಅಭಿನಯಿಸಿದ್ದಾರೆ. ಎಂದಿನ ದರ್ಶನ್ ಚಿತ್ರಗಳಿಗಿಂತ ಭಿನ್ನವಾಗಿರುವ ಚಿತ್ರದಲ್ಲಿ ಅವರು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...