alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿಸುದ್ದಿ

dar-b

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಬಳಿಕ ಅಭಿಮಾನಿಗಳು ‘ತಾರಕ್’ಗಾಗಿ ಕಾಯುತ್ತಿದ್ದಾರೆ.

‘ತಾರಕ್’ ಇನ್ನೂ ಚಿತ್ರೀಕರಣ ಹಂತದಲ್ಲಿದ್ದು, ಈ ನಡುವೆ ಅಭಿಮಾನಿಗಳಿಗೆ ದರ್ಶನ್ ಅವರನ್ನು ತೆರೆ ಮೇಲೆ ನೋಡುವ ಅವಕಾಶ ಸಿಕ್ಕಿದೆ.

ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಶಾಸ್ತ್ರಿ’ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಅಣಜಿ ನಾಗರಾಜ್ ನಿರ್ಮಾಣ, ಪಿ.ಎನ್. ಸತ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಜೂನ್ 9, 2005 ರಂದು ರಿಲೀಸ್ ಆಗಿತ್ತು.

ಇದೇ ಜೂನ್ 9 ರಂದು 5.1 ಡಿಜಿಟಲ್ ಆಡಿಯೋ ವರ್ಷನ್ ನಲ್ಲಿ ಮತ್ತೊಮ್ಮೆ ಬಿಡುಗಡೆಯಾಗಲಿದೆ. ‘ತಾರಕ್’ ಬರುವ ಮೊದಲು ದರ್ಶನ್ ಅಭಿಮಾನಿಗಳು ‘ಶಾಸ್ತ್ರಿ’ಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...