alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳನ್ನು ಮಾತ್ರವಲ್ಲದೇ ಸ್ನೇಹಿತರು, ಆಪ್ತರನ್ನು ಹೊಂದಿದ್ದಾರೆ. ಸ್ನೇಹಿತರು, ಹೊಸಬರ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡ್ತಾರೆ. ಸ್ನೇಹಿತರ ಸಿನಿಮಾ ನಿರ್ಮಾಣ, ಸೇವಾ ಕಾರ್ಯಗಳಿಗೆ ಜೊತೆಯಾಗಿದ್ದಾರೆ.

ಅದೇ ರೀತಿ ಅನೇಕರಿಗೆ ಅವರು ನೆರವಾಗಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ಸಿಗದೇ ಕ್ಯಾಬ್ ಓಡಿಸುತ್ತಿದ್ದ ಖ್ಯಾತ ಕಲಾವಿದ ಶಂಕರ್ ಅಶ್ವಥ್ ಅವರಿಗೆ ದರ್ಶನ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಹಿರಿಯ ನಟ ಕೆ.ಎಸ್. ಅಶ್ವಥ್ ಅವರ ಪುತ್ರರಾದ ಶಂಕರ್ ಅಶ್ವಥ್ ಅವರಿಗೆ ಅವಕಾಶಗಳು ಸಿಗದ ಕಾರಣ ಕ್ಯಾಬ್ ಚಾಲನೆ ಮಾಡಿಕೊಂಡಿದ್ದು, ಇತ್ತೀಚೆಗೆ ಸುದ್ದಿಯಾಗಿತ್ತು.

ಚಿತ್ರರಂಗದಲ್ಲಿ ಅವರಿಗೆ ಮತ್ತೆ ಅವಕಾಶಗಳು ಬರುತ್ತಿವೆ. ಅಂತೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ಅಭಿನಯಿಸಲಿದ್ದಾರೆ. ಶಂಕರ್ ಅಶ್ವಥ್ ಅವರಿಗೂ ಚಿತ್ರದಲ್ಲಿ ಅವಕಾಶ ನೀಡಲು ದರ್ಶನ್ ಚಿತ್ರತಂಡಕ್ಕೆ ಹೇಳಿದ್ದು, ಇದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...